971. ಚಿತ್ರದ ಹೆಸರು ಗೊತ್ತಿರದ ಹಾಡುಗಳು

ದಯವಿಟ್ಟು ಈ ಕೆಳಗಿನ ಹಾಡು ಯಾವ ಚಲನಚಿತ್ರದ್ದೂ ಎಂಬುದು ನಿಮಗೆ ಗೊತ್ತಿದ್ದರೇ ನಮಗೆ ದಯವಿಟ್ಟು ತಿಳಿಸಿರಿ... 

ಧನ್ಯವಾದಗಳು.....

  1. ಮಾನವರನ್ನೇ ಪ್ರೇಮಿಸಬೇಡ  - ಕಾಣಿಕೆ(೧೯೬೯)  - ಅರುಣ
  2. ನಾನು ಸರಸಿ ನೀನು ಅರಸ - ಎಲ್. ಆರ್. ಈಶ್ವರಿ - ಸಿ.ಆರ್.ಎಸ್.ಜೀಯರ್ 
  3. ಹಾರುವೇ ದೂರ ಎಲ್ಲಿಗೆ .... 
  4. ಸೃಷ್ಟಿಯ ಮಾಡುವ ಬ್ರಹ್ಮನೇ 

೪) ಸೃಷ್ಟಿಯ ಮಾಡುವ ಬ್ರಹ್ಮನೇ 
ಸೃಷ್ಟಿಯ ಮಾಡುವ ಬ್ರಹ್ಮನೇ ಲೋಕವ ಪಾಲಿಸೋ ವಿಷ್ಣುವೇ 
ಪ್ರಳಯ ಮಾಡುವ ರುಧ್ರನೇ ಇರುವಿರಿ ಏತಕೇ ಸುಮ್ಮನೇ ... 
ಧರ್ಮವು ಅಳಿಯುತಿದೆ... ಅಧರ್ಮವು ಆಳುತಿದೆ 
ನ್ಯಾಯವು ಸಾಯುತಿದೇ ... ಅನ್ಯಾಯವು ನಗುತಲಿದೆ 
ಸೃಷ್ಟಿಯ ಮಾಡುವ ಬ್ರಹ್ಮನೇ ಲೋಕವ ಪಾಲಿಸೋ ವಿಷ್ಣುವೇ 
ಪ್ರಳಯ ಮಾಡುವ ರುಧ್ರನೇ ಇರುವಿರಿ ಏತಕೇ ಸುಮ್ಮನೇ ... 

ಹೆಣ್ಣು ಹೆಂಡದ ಆಸೆ ತೋರಿಸಿ ಸುಲಿಗೆಯ ಮಾಡುವರೂ 
ಪದವಿ ಮೋಹದ ಕೊಲೆಯ ಮಾಡುವರು ಹೆದರದೇ ಹಗಲಲ್ಲಿ.. 
ನರಿಗಳೋ.. ಹುಲಿಗಳೋ ಭೂತದ ಹರಿಗಳೋ 
ಜನಗಳ ರೂಪದಿ ಬಂದ ರಕ್ಕಸರ... 
ಸೃಷ್ಟಿಯ ಮಾಡುವ ಬ್ರಹ್ಮನೇ ಲೋಕವ ಪಾಲಿಸೋ ವಿಷ್ಣುವೇ 
ಪ್ರಳಯ ಮಾಡುವ ರುಧ್ರನೇ ಇರುವಿರಿ ಏತಕೇ ಸುಮ್ಮನೇ ... 

ಓಟು ಪಡೆಯಲು ಕೈಯ್ಯ ಮುಗಿವರೂ ಭಕ್ತರ ರೀತಿಯಲೀ 
ಜನರ ಸೇವೆಯಲೀ ಜೀವ ತೇಯುವೇವು ಎನ್ನುವರು ಮಾತಲ್ಲಿ... 
ಪದವಿಯ ಪಡೆದರೂ ದುಃಖ ಜನವ ಮರೆಯುವರು 
ಲಂಚದಿ ಮಂಚದಿ ಉರುಳಿ ಮೆರೆಯವರ.... 
ಸೃಷ್ಟಿಯ ಮಾಡುವ ಬ್ರಹ್ಮನೇ ಲೋಕವ ಪಾಲಿಸೋ ವಿಷ್ಣುವೇ 
ಪ್ರಳಯ ಮಾಡುವ ರುಧ್ರನೇ ಇರುವಿರಿ ಏತಕೇ ಸುಮ್ಮನೇ ... 
ಧರ್ಮವು ಅಳಿಯುತಿದೆ... ಅಧರ್ಮವು ಆಳುತಿದೆ 
ನ್ಯಾಯವು ಸಾಯುತಿದೇ ... ಅನ್ಯಾಯವು ನಗುತಲಿದೆ 
ಸೃಷ್ಟಿಯ ಮಾಡುವ ಬ್ರಹ್ಮನೇ ಲೋಕವ ಪಾಲಿಸೋ ವಿಷ್ಣುವೇ 
ಪ್ರಳಯ ಮಾಡುವ ರುಧ್ರನೇ ಇರುವಿರಿ ಏತಕೇ ಸುಮ್ಮನೇ ... 
-----------------------------------------------------------------------------     
 
3) ಹಾರುವೇ ದೂರ ಎಲ್ಲಿಗೇ ... ಆಹಾಹಾಹಾ 
ಹಾರುವೇ ದೂರ ಎಲ್ಲಿಗೇ ... ಆಹಾಹಾಹಾ ಹೇಳುವೇ ಬೇರಾರಲ್ಲಿಗೇ ... 
ಹಾರುವೇ ದೂರ ಎಲ್ಲಿಗೇ ...ಹೇಳುವೇ ಬೇರಾರಲ್ಲಿಗೇ ... 
ಇರಲು ನಲ್ಲೇ ತೊರೆದು ಇಲ್ಲೇ ನೆರಳುವರೀ ಹೀಗೆ .. ಮರಳಿ ಬಾ ಇಲ್ಲಿಗೇ ... 

ತೀರದ ದೂರ ವಿಶ್ವ ಅಪಾರ ಅರಿತವರಾರೋ ಅದರ ಆಕಾರ... 
ತೀರದ ದೂರ ವಿಶ್ವ ಅಪಾರ ಅರಿತವರಾರೋ ಅದರ ಆಕಾರ... 
ತೋರುವ ಆಶಾ ಬೀರುವ ಪಾಶ ಬರಿಯ ನೀರಾಶ ನಿಜವೇಷ 
ತರವಿ ರೋಷ ಹರುಷ ರಾಷ ಮೀರಿದ ಅವಕಾಶ ನಿನಗೆ ಬಾರದು ನಾಳೆಗೇ ... 
ಹಾರುವೇ ದೂರ ಎಲ್ಲಿಗೇ ...ಹೇಳುವೇ ಬೇರಾರಲ್ಲಿಗೇ ... 
ಇರಲು ನಲ್ಲೇ ತೊರೆದು ಇಲ್ಲೇ ನೆರಳುವರೀ ಹೀಗೆ .. ಮರಳಿ ಬಾ ಇಲ್ಲಿಗೇ ... 

ಇಂದಿನ ನಾಡು ಬಾಳುವೇ ನೋಡು ನೊಂದವರ ಕಡುಗೋಳಿನ  ಹಾಡು 
ಇಂದಿನ ನಾಡು ಬಾಳುವೇ ನೋಡು ನೊಂದವರ ಕಡುಗೋಳಿನ  ಹಾಡು 
ದುಡಿಯುವರಾರೋ ಪಡೆಯುವರಾರೋ ನಡೆದಿಹದಿಂದೆಲ್ಲರ ಬಾಳು 
ಕೊಳಚೆ ತಂದ ಕಳಚಿ ಬಂದ ಗೆಳೆಯನ ನಿನಗೆ ನಲಿವೆ ನಿನ್ನೊಂದಿಗೇ .. 
ಹಾರುವೇ ದೂರ ಎಲ್ಲಿಗೇ ...ಹೇಳುವೇ ಬೇರಾರಲ್ಲಿಗೇ ... 
ಇರಲು ನಲ್ಲೇ ತೊರೆದು ಇಲ್ಲೇ ನೆರಳುವರೀ ಹೀಗೆ .. ಮರಳಿ ಬಾ ಇಲ್ಲಿಗೇ ... 
ಹಾರುವೆ... ಹೇಳುವೇ ... ಇರಲು... ನೆರಳು... ಹೇಹೇಹೇ ... ಲಾಲಾಲಲಲಾಲಾಲ 
--------------------------------------------------------------------------------------

ಚಿತ್ರದ ಹೆಸರು : ?  ರಾಜಾ ರಾಜಾ ... ನಾನು ಸರಸಿ ನೀನು ಅರಸ ಆಳಿ ನೋಡ ಬಾ 
ಸಾಹಿತ್ಯ : ದ ರಾ ಬೇಂದ್ರೆ, ಗಾಯನ : ಎಲ್ ಆರ್ ಈಶ್ವರಿ

ನಾನು ಸರಸಿ ನೀನು ಅರಸ ಆಳಿ ನೋಡ ಬಾ
ನಾನು ಸರಸಿ ನೀನು ಅರಸ ಆಳಿ ನೋಡ ಬಾ
ನಾನು ನೀರೆ ನೀನು ನಲ್ಲ 
ನಾನು ನೀರೆ ನೀನು ನಲ್ಲ ಬಾಳಿ ನೋಡ ಬಾ
ನಾನು ಸರಸಿ ನೀನು ಅರಸ

ನಾನು ಹಣ್ಣು ನೀನು ಗಿಣಿಯು ಕುದುಕಿ ನೋಡ ಬಾ
ನಾನು ಹಣ್ಣು ನೀನು ಗಿಣಿಯು ಕುದುಕಿ ನೋಡ ಬಾ
ನಾನು ಗೆಳತಿ ನೀನು ಗೆಳೆಯ 
ನಾನು ಗೆಳತಿ ನೀನು ಗೆಳೆಯ ಬದುಕ ಮಾಡ ಬಾ
ನಾನು ಸರಸಿ ನೀನು ಅರಸ 

ನಾನು ನೋಟ ನೀನು ಕಣ್ಣು ಬೆಳಕ ನೀಡ ಬಾ
ನಾನು ನೋಟ ನೀನು ಕಣ್ಣು ಬೆಳಕ ನೀಡ ಬಾ
ನಾನು ಮಾಯೆ ನೀನು ಈಶ
ನಾನು ಮಾಯೆ ನೀನು ಈಶ ಮೋಡಿಯಾಡ ಬಾ
ನಾನು ಸರಸಿ ನೀನು ಅರಸ

ಗಾಳಿ ನಾನು ಬಾನು ನೀನು ಮೂಡಿ ನೋಡ ಬಾ
ಗಾಳಿ ನಾನು ಬಾನು ನೀನು ಮೂಡಿ ನೋಡ ಬಾ
ಗೀತ ನಾನು ಪ್ರೀತ ನೀನು 
ಗೀತ ನಾನು ಪ್ರೀತ ನೀನು ಕಟ್ಟಿ ಹಾಡ ಬಾ
ನಾನು ಸರಸಿ ನೀನು ಅರಸ ಆಳಿ ನೋಡ ಬಾ
ನಾನು ಸರಸಿ ನೀನು ಅರಸ ಆಳಿ ನೋಡ ಬಾ
ನಾನು ನೀರೆ ನೀನು ನಲ್ಲ
ನಾನು ನೀರೆ ನೀನು ನಲ್ಲ ಬಾಳಿ ನೋಡ ಬಾ
ನಾನು ಸರಸಿ ನೀನು ಅರಸ
---------------------------------------------------------------------------------------------------

2 comments:

  1. ಚಿತ್ರ : ಕಾಣಿಕೆ - ೧೯೬೯
    ಸಾಹಿತ್ಯ : ಸೋರಟ್ ಅಶ್ವತ್ಥ್
    ಸಂಗೀತ : ಸತ್ಯಂ
    ನಟರು : ಕಲ್ಪನಾ - ರಾಜೇಶ್ - ಶೈಲಶ್ರೀ

    ReplyDelete
  2. ಈ ಗೀತೆ ಯಾವ ಚಿತ್ರದ್ದು ಎಂದು ಹುಡುಕಿ ತೆಗೆಯಬೇಕಾಗಿದೆ. ಪ್ರಯತ್ನ ಪಟ್ಟು ತಿಳಿದರೆ ದಯವಿಟ್ಟು ಪ್ರಕಟಿಸಿ.

    ಗೀತೆ ರಚನೆ: ದ ರಾ ಬೇಂದ್ರೆ
    ರಾಜಾ ರಾಜಾ ...
    ನಾನು ಸರಸಿ ನೀನು ಅರಸ ಆಳಿ ನೋಡ ಬಾ
    ನಾನು ನೀರೆ ನೀನು ನಲ್ಲ ಬಾಳಿ ನೋಡ ಬಾ

    ಎಲ್ ಆರ್ ಈಶ್ವರಿ ಅವರ ಧ್ವನಿಯಲ್ಲಿದೆ ಮತ್ತು ಪುರುಷ ಧ್ವನಿಯ ಹಮ್ಮಿಂಗ್ ಸಹ ಇದೆ.

    ReplyDelete