978. ಉತ್ತರ ದಕ್ಷಿಣ (೧೯೬೮)


ಉತ್ತರ ದಕ್ಷಿಣ ಚಲನಚಿತ್ರದ ಹಾಡುಗಳು
  1. ಕನ್ನಡ ನಾಡೇ ಭಾಗ್ಯದ ನಿಲಯ
  2. ಸುರಲೋಕದಿಂದ ಹರಿಪಾದ‌
  3. ಪ್ರಭುವೇ ಶಂಕರ ದಯಾಮಯಾ
  4. ಚೆಲುವಾದ ಅರವಿಂದ ನಗೆ ಬೀರಿದೆ
  5. ಕೊಡಗಿನಾ ತವರಲ್ಲಿ ಬೆಡಗಿನ
  6. ಮಿಂಚಿನ ಬಾಳಿನ ಮುನ್ನಡಿ 
  7. ಕನ್ನಡ ದೇವಿಯ ಮಕ್ಕಳೇ
  8. ರವಿಯು ಬಂದಾ ಉಷೆಯ ಕೆನ್ನೆಗೇ
ಉತ್ತರ ದಕ್ಷಿಣ (೧೯೬೮) - ಕನ್ನಡ ನಾಡೇ ಭಾಗ್ಯದ ನಿಲಯ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಎಸ್.ಪಿ.ಬಿ 

ಕೋರಸ್: ಆ.. ಅಹ್ಹಹ್ಹ ಅಹ್ಹಹ್ಹಹ್ಹಹ್ಹಹ್ಹಾ ... ಓ.. ಓಹೋ
                ಓಹೋಹೋ ಲಾ ಲಲ್ಲಲ್ಲಲ್ಲಲ್ಲಲ್ಲಾ
ಗಂಡು : ಕನ್ನಡ ನಾಡೇ ಭಾಗ್ಯದ ನಿಲಯ
            ಭಾರತ ಮಾತೆಯ ಹೃದಯ
            ಎಲ್ಲಿದೆ ಇಂಥ ಸೌಂದರ್ಯ
            ಕನ್ನಡಿಗನೇ ಪಡು ಹೆಮ್ಮೆಯ
            ಕನ್ನಡ ನಾಡೇ ಭಾಗ್ಯದ ನಿಲಯ
            ಭಾರತ ಮಾತೆಯ ಹೃದಯ

ಗಂಡು: ನಾವೇ ನಾಡಿನ ಭಾಗ್ಯವಿಧಾತರು
            ಶಿಲ್ಪವೇ ನಮ್ಮ ಕಲ್ಪತರು 
            ಭಾರತಮಾತೆಯ ಹರಕೆಯ ಹೊತ್ತ
             ಬಾಳಿನ ಗುರಿಯ ಸಾಧಕರು 
            ಕನ್ನಡ ನಾಡೇ ಭಾಗ್ಯದ ನಿಲಯ
             ಭಾರತ ಮಾತೆಯ ಹೃದಯ 
ಕೋರಸ್: ಆ.. ಅಹ್ಹಹ್ಹ ಅಹ್ಹಹ್ಹಹ್ಹಹ್ಹಹ್ಹಾ ... ಓ.. ಓಹೋ
                ಓಹೋಹೋ ಲಾ ಲಲ್ಲಲ್ಲಲ್ಲಲ್ಲಲ್ಲಾ
ಗಂಡು,: ಬಂದಿದೆ ಬಾಳಿನ ಹೊಸ ಮುಂಜಾವು 
             ನಗುತಿದೆ ಕನ್ನಡ ದೇವಿಯ ಮೊಗವು 
             ಹೇಳು.. ಹೇಳು.. ಗೆಳೆಯಾ....ಆ.ಆಆಆ..
             ಹೇಳು.. ಹೇಳು.. ಗೆಳೆಯಾ ಬಾರದು ಇಂಥಾ ಸಮಯ 
             ಕನ್ನಡ ನಾಡೇ ಭಾಗ್ಯದ ನಿಲಯ
              ಭಾರತ ಮಾತೆಯ ಹೃದಯ 

ಗಂಡು : ಚಿನ್ನದ ಗಣಿಯ ಚಂದದ ಊರು 
      ಗಂಧದ ಗುಡಿಯೇ ಮೈಸೂರು 
      ಚಿನ್ನದ ಗಣಿಯ ಚಂದದ ಊರು 
      ಗಂಧದ ಗುಡಿಯೇ ಮೈಸೂರು 
      ಇದುವೇ ರಸಿಕರ ತೌರೂರು 
      ಇಲ್ಲಿದೆ ಅಳಿಯದ ಸಂಸ್ಕೃತಿ ಉಸಿರು
       ಕನ್ನಡ ನಾಡೇ ಭಾಗ್ಯದ ನಿಲಯ
       ಭಾರತ ಮಾತೆಯ ಹೃದಯ 
        ಎಲ್ಲಿದೆ ಇಂಥ ಸೌಂದರ್ಯ ಕನ್ನಡಿಗನೇ ಪಡು ಹೆಮ್ಮೆಯ
ಕೋರಸ್: ಆ.. ಅಹ್ಹಹ್ಹ ಅಹ್ಹಹ್ಹಹ್ಹಹ್ಹಹ್ಹಾ ... ಓ.. ಓಹೋ
                ಓಹೋಹೋ ಲಾ ಲಲ್ಲಲ್ಲಲ್ಲಲ್ಲಲ್ಲಾ
------------------------------------------------------------------------ 

ಉತ್ತರ ದಕ್ಷಿಣ (೧೯೬೮) - ಸುರಲೋಕದಿಂದ ಹರಿಪಾದ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಎಸ್.ಜಾನಕೀ, ಬೆಂಗಳೂರು ಲತಾ 

ಜಾನಕೀ: ಆಆ ಆಆಆಆ ಆಆಆಆಆಆ ಆಆಆ ಆಆಆಅಅ
        ಸುರಲೋಕದಿಂದ ಹರಿಪಾದ ತೊರೆದು ಧರೆಗೆ
        ದೊಡ್ಡವರ     ಇಳಿದು ಬಂದ ಹೆಣ್ಣು.. ಹೊರ ಪಾಪ
        ನೀಗೇ  ಹೆಸರೊಂದೇ ಸಾಕು ಹರ ಮಾಡಿದ ವರವ ನಾನು
        ನಿರುಪಮೆ ನಾನಾದೆನೂ ಸಖೀ..ಎನದಲೇಯಾರನೂ...
ಲತಾ: ಕರುನಾಡ ನಿಧಿಯಲಿ ನದಿಯಾಗಿ ಹರಿದು
         ವರವಾಗಿ ಬಂದ ಹೆಣ್ಣು ಶ್ರೀರಂಗ ನಿಧಿಯ
         ಶೃಂಗಾರ ಧಾರೆ ಪ್ರತಿರೂಪವಾದೆ ನಾನೂ..
         ನಿರುಪಮೆ ನಾನಾದೆನೂ ಸಖೀ..ಸಿರಿಸುಖ ನಾದೇನೂ

ಜಾನಕೀ: ಒಲಿಯುತ ಬಂದೆ ತಾಪಸಿ ಹಿಂದೆ
            ನಾಡಿಗೆ ಹಿರಿಮೆ ನಾನೇ ತಂದೆ..
            ಒಲಿಯುತ ಬಂದೆ ತಾಪಸಿ ಹಿಂದೆ
            ನಾಡಿಗೆ ಹಿರಿಮೆ ನಾನೇ ತಂದೆ..
            ಹೇಮವಾಹಿನೀ ಜ್ಞಾನವೀ ನಾನೇ
            ಪುಣ್ಯವಾಹಿನಿ ಪಾವನಿಗಂಗೆ
            ತ್ರೀಲೋಕಗಳು ನಮೋ ಎನುವಾ
            ಮಹಾನದಿಯೂ ಯಾವುದಿದೇ
            ನಿರುಪಮೆ ನಾನಾದೆನೂ ಸಖೀ..ಎನದಲೇಯಾರನೂ.
ಲತಾ: ಹನುಮನ ತೌರು ಕನ್ನಡ ಸೀಮೆ ಜನ್ಮಿಸಿಯಲ್ಲಿ
            ಎಂಥಾ ಹಿರಿಮೆ
             ಹನುಮನ ತೌರು ಕನ್ನಡ ಸೀಮೆ ಜನ್ಮಿಸಿಯಲ್ಲಿ
             ಎಂಥಾ ಹಿರಿಮೆ
             ಇಂಥ ನಾಡಿನ ಭಾಗ್ಯವೂ ನಾನೇ
             ಐಕ್ಯಗೇ ಸಾಟಯೇ ನಾನೇ..
             ಇದೇ ಸುಧೆಗೆ ಮಹಾ ಕೊಡುಗೆ
             ಸಮಾನತೆಗೆ ಯಾವುದಿದೇ...
            ನಿರುಪಮೆ ನಾನಾದೆನೂ ಸಖೀ..ಸಿರಿಸುಖ ನಾದೇನೂ

ಜಾನಕೀ: ಆರತಿ ನಮ್ಮ ಭಾಗ್ಯವಿಧಾತೇ ಉತ್ತರ ದಕ್ಷಿಣ
              ಜೀವನಧಾತೇ ಈಶನೇ ದೇಹ ಭೂಕೃತಿ ಜೀವ
             ಉತ್ತರ ದಕ್ಷಿಣ ಒಂದೇ ಭಾವ
ಲತಾ: ದೇಶ ಬಾಷೆಯ ಭೇಧ ಭಾವವೇಕೆ
ಜಾನಕೀ: ಒಂದುಗೂಡಿರಿ  ಸ್ವರ್ಗ ತೀರಿಸಿದೇಕೆ
ಇಬ್ಬರು: ಇನ್ನೂ ದೂರವೇಕೆ
ಜಾನಕೀ: ಮಾತು ಒಂದೇ ಸಾಕೇ
ಲತಾ: ಜೀವದ ಜೀವವಾಹಿನಿ ಒಂದಾಗಿದೆ ಬಾ
ಜಾನಕೀ :  ನೀಡುವ ನಮ್ಮ ಜೀವನ ನಮ್ಮ ಚಿರಚೇತನವ
ಇಬ್ಬರು: ಸರಿಸಮವಾದೆವೂ..ಸಖಿ..ಸಿರಿಸುಖ ನಾವಾದೇವೂ
ಜಾನಕೀ: ಸುರಲೋಕದಿಂದ ಹರಿಪಾದ ತೊರೆದು ಧರೆಗೆ
              ದೊಡ್ಡವರ ಇಳಿದು ಬಂದ ಹೆಣ್ಣು.
.ಲತಾ: ಕರುನಾಡ ನಿಧಿಯಲಿ ನದಿಯಾಗಿ ಹರಿದು
           ವರವಾಗಿ ಬಂದ ಹೆಣ್ಣು
ಇಬ್ಬರು: ಸರಿಸಮವಾದೆವೂ..ಸಖಿ.. ಸಿರಿಸುಖ ನಾವಾದೇವೂ..
-----------------------------------------------------------------------

ಉತ್ತರ ದಕ್ಷಿಣ (೧೯೬೮) - ಪ್ರಭುವೇ ಶಂಕರ ದಯಾಮಯಾ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಸರೋಜ,ವಸಂತ,ಲತಾ

ಓಂ..ಓಂ..ಓಂ..ಓಂ..ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
ಪ್ರಭುವೇ ಶಂಕರ ದಯಾಮಯಾ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಪ್ರಭುವೇ ಶಂಕರ ದಯಾಮಯಾ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಗಂಗೇಯ ಧರೇಗೆ ಕಳುಹಯ್ಯಾ
ಭೂಲೋಕ ಕಾವನೂ ತೊಲಗಸಯ್ಯಾ
ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ  ನಮಃ ಶಿವಾಯಃ
ನಮಃ ಶಿವಾಯಃ  ನಮಃ ಶಿವಾಯಃ
ನಮಃ ಶಿವಾಯಃ  ನಮಃ ಶಿವಾಯಃ

ಕಣ್ಣ ತೆರೆ ಕಣ್ಣ ತೆರೆ ತಪೋವನಾ
ನೀಡುವೇ ನಿನಗೇ ವರದಾನ
ಗಂಗೆಯ ಭೂವಿಗೇ ಇಳಿಸುವೇನೂ
ಗೊಂದಲಿ ಸಂತಸ ಮನು ಸಂತಾನ
ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ

ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಗಂಗಾ..ಗಂಗಾ.. ಗಂಗಾ

ಹರಿಪಾದವ ನಾ‌ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಹರಿಪಾದವ ನಾ‌ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಒಲ್ಲೆ..ಒಲ್ಲೆ..ಶಿವನೇ..ಬೇಡ ಇಂಥ ಬವಣೆ

ಇದು ಶಿವನಾಣತಿ ನಿನಗೇ..ಮೀರದೇ ಬಾರೇ ಬಳಿಗೆ ಗಂಗಾ..ಗಂಗಾ..ಗಂಗಾ
ಥಕಥಕ ಥೈ..ಥೈ ಎನ್ನುತ್ತಾ ಕುಣಿಯುತ  ತಳಾಪತದಗಿನ
ಎನ್ನುತ ನಲಿಯುತ ಮೊರೆಯುತ ಮೆರೆಯುತ ಚಿತ್ತರಿಸುತ್ತಾ
ಬರುವೆಯ ಉದ್ದಟ ಎನ್ನತ್ತ
ಮುಡಿಯೊಳು ನಿನ್ನನ್ನೂ ಅಡಗಿಸ ಬಲ್ಲೆ
ಪುಂಡನ ಇಡಗಿ ನೀನಿಲ್ಲೀ...ನೀನಿಲ್ಲೀ...ನೀನಿಲ್ಲೀ...

ನೀಡಿತೇ ಶಂಕರ ಅಭಯಕ ಗಾನ‌
ಏನಾಯಿತು ನಿನ್ನಯ ವರದಾನ
ಗಂಗೆಯ ಮುಡಿಯಲಿ ನೀ ಧರಿಸಿ
ಬೇಡಲೇ ಯಾರನು ತಾಪವ ಹರಿಸೂ
ಶಂಭೋ..ಶಂಭೋ..ಶಂಭೋ

ಪಡೆದಿಹ ವರವನು ಭಗಿರಥ ನಡೆ ನಡೆ ಗಂಗೆ ಭೂವಿಯತ್ತ..
ಪಡೆದಿಹ ವರವನು ಭಗಿರಥ ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
-----------------------------------------------------------------

ಉತ್ತರ ದಕ್ಷಿಣ (೧೯೬೮) - ಚೆಲುವಾದ ಅರವಿಂದ ನಗೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಸರೋಜ,ವಸಂತ,ಲತಾ

ಚೆಲುವಾದ ಅರವಿಂದ ನಗೆ ಬೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ಮಧು ತುಂಬಿ ಹೂವೊಂದು ಬಾರೆಂದಿದೆ...ಆಆಅ...
ಮಧು ತುಂಬಿ ಹೂವೊಂದು ಬಾರೆಂದಿದೆ
ಮರಿದುಂಬಿ ಅದ ಕಂಡೂ....
ಮರಿದುಂಬಿ ಅದ ಕಂಡೂ ಆಡಿ ಆಡಿ ಓಡಿ ಸವಿದಿದೆ
ಚೆಲುವಾದ ಅರವಿಂದ ನಗೆ ಬೀರಿದೆ..

ಮಧುಮಾಸ ಮಾಂಗಿಲಿರ ಹೊಸ ತೋರಣ
ಮಧುಮಾಸ ಮಾಂಗಿಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಮಧುಮಾಸ ಮಾಂಗಿಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಅನುರಾಗ ಅನುಬಂಧ ಸುಖಸಾಧನ....ಆಅಅ
ಸದ ಸನಿದಮ ದಮ ದಸನಿದ ಸಗದ ದಮನಿ‌ ದನಿ
ಮದನಿಸ ಪನಿಸ ಗಮ ಸನಿದಮ ನಿಸ ಗಾಮದಸ
ಸಾ ಸಾ ನಿದಮಗನಿ ಸಾ ಸಾ ದನಿಸ
ಅನುರಾಗ ಅನುಬಂಧ ಸುಖಸಾಧನ.
ನಿನಿ ಸದನಿ ಮದ ಸಾಸ ದನಿಸ ಮಗ ಗಮಗಸ ನಿಸ ಸದನಿ
ದಮದಸ ಗಮಗಸ ಸಾದ ನಿಮದ ದಮದರಿ ಸನಿ ಸನಿದಮದ ಸಾ..ಗಾ.. ಗಾ..ಸಗಮದನಿಸ
ಅನುರಾಗ ಅನುಬಂಧ ಸುಖಸಾಧನ ಬಹು ರಮ್ಯ ಚಿರನವ್ಯ
ಅನುರಾಗ ಅನುಬಂಧ ಸುಖಸಾಧನ ಬಹು ರಮ್ಯ ಚಿರನವ್ಯ
ಗಾನ ಪಾನ‌ ಗಾನ‌ ಅನುದಿನ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
-----------------------------------------------------------------------

ಉತ್ತರ ದಕ್ಷಿಣ (೧೯೬೮) - ಕೊಡಗಿನಾ ತವರಲ್ಲಿ ಬೆಡಗಿನ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಎಸ್.ಜಾನಕೀ

ಕೊಡಗಿನಾ ತವರಲ್ಲಿ ಬೆಡಗಿನ ಭಾಗಮಂಡಲದಲ್ಲಿ ಜನಿಸಿದ
ತಾಯಿ ಕಾವೇರಿ ಶ್ರೀರಂಗ ಕೊರಳ ಮಾಲೆಯಾ
ವಾಸಿ ಹರಿವಳು ಕನ್ನಡ ನಾಡಿನಲೀ...
-----------------------------------------------------------------------

ಉತ್ತರ ದಕ್ಷಿಣ (೧೯೬೮) - ಮಿಂಚಿನ ಬಾಳಿನ ಮುನ್ನುಡಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಪ.ಬಿ.ಎಸ್, ಎಸ್.ಜಾನಕೀ

ಹೆಣ್ಣು: ಮಿಂಚಿನ ಬಾಳಿನ ಮುನ್ನಡಿ ಬರೆಯಿತು
           ಸಿಡಿಲಿನ ಚೇತನ ಜೀವಕೆ ನೀಡಿತು
           ಮಿಂಚಿನ ಬಾಳಿನ ಮುನ್ನಡಿ ಬರೆಯಿತು
           ಸಿಡಿಲಿನ ಚೇತನ ಜೀವಕೆ ನೀಡಿತು
           ಆಸಯ ಹೊನಲೇ ಚುಮ್ಮುತ ಬಂದಿತು
           ಆಸಯ ಹೊನಲೇ ಚುಮ್ಮುತ ಬಂದಿತು
         ‌‌  ಹೊಸರಾಗ ತಾಣದ‌ ಪಲ್ಲವಿ ತಂದಿತು
ಗಂಡು: ಇಲ್ಲಿಂದ ಸ್ವರ್ಗಕ್ಕೆ ಸೇತುವೇ ರಚಿಸುವೆ
           ಅಲ್ಲಿಂದ ಅಮೃತವಾಹಿನಿ ತರಿಸುವೆ
           ಇಲ್ಲಿಂದ ಸ್ವರ್ಗಕ್ಕೆ ಸೇತುವೇ ರಚಿಸುವೆ
           ಅಲ್ಲಿಂದ ಅಮೃತವಾಹಿನಿ ತರಿಸುವೆ
           ಬಾಳಿನ ನೋವೆ ನೀಗಿಸಿ ಆಳುವೇ
           ಬಾಳಿನ ನೋವೆ ನೀಗಿಸಿ ಆಳುವೇ
           ಎಂದೆಂದೂ ಒಲವ ಮೊಜನು ಕಾಣುವೆ

ಹೆಣ್ಣು: ಮೀರಿತು ಲಜ್ಜೆ ಹಾಕಿದ ಹೆಜ್ಜೆ ಗೆಜ್ಜೆ ಘಲಿರೂ
           ನನ್ನಲ್ಲಿ ಎನೋ ಗುಂಗಿನ ಗಾನ ಎನೋ ಸುಮ್ಮಾನ     
           ಮೀರಿತು ಲಜ್ಜೆ ಹಾಕಿದ ಹೆಜ್ಜೆ ಗೆಜ್ಜೆ ಘಲಿರೂ
           ನನ್ನಲ್ಲಿ ಎನೋ ಗುಂಗಿನ ಗಾನ ಎನೋ ಸುಮ್ಮಾನ
ಗಂಡು: ತಾಳೇನು ಹೆಣ್ಣೆ ನಿನ್ನ ವಿಧಾನ ಆದರೂ ಬಲ್ಲೆ ನಿನ್ನಾ ಗುಣ
           ತಾಳೇನು ಹೆಣ್ಣೆ ನಿನ್ನ ವಿಧಾನ ಆದರೂ ಬಲ್ಲೆ ನಿನ್ನಾ ಗುಣ
           ಇಲ್ಲಿಂದ ಸ್ವರ್ಗಕ್ಕೆ ಸೇತುವೇ ರಚಿಸುವೆ
           ಅಲ್ಲಿಂದ ಅಮೃತವಾಹಿನಿ ತರಿಸುವೆ
           ಬಾಳಿನ ನೋವೆ ನೀಗಿಸಿ ಆಳುವೇ
           ಬಾಳಿನ ನೋವೆ ನೀಗಿಸಿ ಆಳುವೇ
           ಎಂದೆಂದೂ ಒಲವ ಮೊಜನು ಕಾಣುವೆ

ಗಂಡು : ನನ್ನಲ್ಲಿ ನೀನು ನಿನ್ನಲ್ಲಿ ನಾನು ಒಂದೇ ಉಸಿರು
            ಸಂಗಮದಲ್ಲಿ ತುಂಬಿದೆ ಬಾಳು ಬಾರೇ ನಗೆ ಚೆಲ್ಲಿ
             ನನ್ನಲ್ಲಿ ನೀನು ನಿನ್ನಲ್ಲಿ ನಾನು ಒಂದೇ ಉಸಿರು
             ಸಂಗಮದಲ್ಲಿ ತುಂಬಿದೆ ಬಾಳು  ಬಾರೇ ನಗೆ ಚೆಲ್ಲಿ
ಹೆಣ್ಣು: ಜೀವನವೇನಾ ತಾಣವೇ ತಾನ ನಾದದ
           ಲೀಲೆಯ ಕಂಡೇನು ನಾ...
           ಮಿಂಚಿನ ಬಾಳಿನ ಮುನ್ನಡಿ ಬರೆಯಿತು
           ಸಿಡಿಲಿನ ಚೇತನ ಜೀವಕೆ ನೀಡಿತು
ಗಂಡು: ಬಾಳಿನ ನೋವೆ ನೀಗಿಸೂ ಆಳುವೇ         
            ಬಾಳಿನ ನೋವೆ ನೀಗಿಸೂ ಆಳುವೇ
            ಎಂದೆಂದೂ ಒಲವ ಮೊಜನು ಕಾಣುವೇ...
ಇಬ್ಬರು: ಲಲಲಾ ಲಲಲಾ ಲಲಲಲಾ ಲ್ಲಲ್ಲಲಾ ಲ್ಲಲ್ಲಲಾ
            ಲಲಲಾ ಲಲಲಾ ಲಲಲಲಾ ಲ್ಲಲ್ಲಲಾ ಲ್ಲಲ್ಲಲಾ
--------------------------------------------------------------------

ಉತ್ತರ ದಕ್ಷಿಣ (೧೯೬೮) -  ಕನ್ನಡ ದೇವಿಯ ಮಕ್ಕಳೇ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ :‌ ಎಸ್‌. ಪಿ.ಬಿ, ಲತಾ

ಹೆಣ್ಣು: ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
           ನಾಡಿನ ನಂದಾದೀಪವ ಬೆಳಗುವ ಅಂಧಕಾರವನು
           ನೀಗಿಸುವ ಅಕ್ಷರಂತರಾಗುವ ಮಾನವರಾಗಿ ಬಾಳುವಾ
           ಕನ್ನಡ ದೇವಿ ಮಕ್ಕಳೇ....

ಹೆಣ್ಣು: ರನ್ನ ಪಂಪ ಕುಮಾರ ವ್ಯಾಸರ ಕಾವ್ಯವಾಹಿನಿ ನಾಡಿದು
           ಈ ಶತಮಾನದ ಬೇಂದ್ರೆ ಕುವೆಂಪು ತಂದರು ಭಾಷೆಗೆ
           ಹೊಸ ಸೊಂಪು
           ರನ್ನ ಪಂಪ ಕುಮಾರ ವ್ಯಾಸರ ಕಾವ್ಯವಾಹಿನಿ ನಾಡಿದು
           ಈ ಶತಮಾನದ ಬೇಂದ್ರೆ ಕುವೆಂಪು ತಂದರು ಭಾಷೆಗೆ
           ಹೊಸ ಸೊಂಪು ಕಲಿತರೇ ಕತ್ತಲೇ ತೊಲಗುವುದು
           ಬಾಳಿನ ಮುನ್ನಡೆ ತೊರುವುದು
           ಕನ್ನಡ ದೇವಿಯ ಮಕ್ಕಳೇ...

ರಾಜೇಶ: ಎಚ್ಚರ... ಎಚ್ಚರ.. ಈ ಯುಗ ಮೃಗಗಳ ಬೀಡು ಎಚ್ಚರ
              ತೊಕ್ಕಲೂ ಮೋಸಕೆ ಇಡೂ ಅರಿತವ ಬಾಳನು
              ಆಳುವ ನೋಡು ಹಿಗ್ಗಿಂದಲೇ ಹೊನ್ನಾಡು
              ಕನ್ನಡ ದೇವಿಯ ಮಕ್ಕಳೇ..

ರಮೇಶ: ಕನ್ನಡ ನಾಡಿನ ವಿದ್ಯಾರಣ್ಯರು ಚಿನ್ನದ ಮಳೆಯನು
             ತಂದ ಗುರು ಅಂತೆಯೇ ನಮ್ಮ ವಿಶ್ವೇಶ್ವರಯ್ಯ ಇಂದಿನ
             ನಮ್ಮ ಆಚಾರ್ಯ..
             ಕನ್ನಡ ನಾಡಿನ ವಿದ್ಯಾರಣ್ಯರು ಚಿನ್ನದ ಮಳೆಯನು
             ತಂದ ಗುರು ಅಂತೆಯೇ ನಮ್ಮ ವಿಶ್ವೇಶ್ವರಯ್ಯ ಇಂದಿನ
             ನಮ್ಮ ಆಚಾರ್ಯ ಇಂದಿಗೂ ಇವರ ಹೆಜ್ಜೆಯ ಗುರುತೇ
             ನೀಗಬಲ್ಲದು ಬಾಳಿನ ಕೊರತೆ
             ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
 ಹೆಣ್ಣು:   ನಾಡಿನ ನಂದಾದೀಪವ ಬೆಳಗುವ ಅಂಧಕಾರವನು
             ನೀಗಿಸುವ ಅಕ್ಷರಂತರಾಗುವ ಮಾನವರಾಗಿ ಬಾಳುವಾ
             ಮಾನವರಾಗಿ ಬಾಳುವಾ..
-----------------------------------------------------------------------

ಉತ್ತರ ದಕ್ಷಿಣ (೧೯೬೮) -  ರವಿಯು ಬಂದಾ ಉಷೆಯ ಕೆನ್ನೆಗೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಕುರಾಸಿ, ಗಾಯನ : ಎಸ್.ಜಾನಕೀ...

ಹೆಣ್ಣು:  ಆಆಆಆಆಆ ಆಆಆ ಆಆ ಆಅಅ..
           ರವಿಯು ಬಂದಾ ಉಷೆಯ ಕೆನ್ನೆಗೆ ರಂಗು ತಂದಾ
           ಎಂಥಾ ಚೆಲವೂ ಎಂಥಾ ಒಲವೂ ಆಹಾ ಅನುಬಂಧ...
           ರವಿಯು ಬಂದಾ ಉಷೆಯ ಕೆನ್ನೆಗೆ ರಂಗು ತಂದಾ
          ಎಂಥಾ ಚೆಲವೂ ಎಂಥಾ ಒಲವೂ ಆಹಾ ಅನುಬಂಧ...

ಹೆಣ್ಣು: ಆಹಾಹ..     ಕೋರಸ್: ಓಹೋ..ಓಹೋಹೋ
ಹೆಣ್ಣು: ಆಹಾಹ..     ಕೋರಸ್: ಓಹೋ..ಓಹೋಹೋ
ಹೆಣ್ಣು: ಹೂವೂ ಬಳ್ಳಿ ಗಿಡದ ಮೇಲೆ 
ಕೋರಸ್: ಓಓಓಓಓ..
ಹೆಣ್ಣು: ಮಂಜು ಹನಿಯ ಮಣಿಯ ಮಾಲೆ
ಕೋರಸ್: ಓಓಓಓಓ.. ಓಓಓಓಓ..
ಹೆಣ್ಣು: ಹೂವೂ ಬಳ್ಳಿ ಗಿಡದ ಮೇಲೆ ಮಂಜು ಹನಿಯ ಮಣಿಯ
           ಮಾಲೆ ನೀಲ ಗಗನವೇ ಮೇಘಮಾಲೆ
       ಕದ್ದು ಕದ್ದು ಹಾಡುತಿದೇ.. ಮುದ್ದು ಸ್ವರದ ಕೋಗಿಲೆ
       ಕದ್ದು ಕದ್ದು ಹಾಡುತಿದೇ.. ಮುದ್ದು ಸ್ವರದ ಕೋಗಿಲೆ..ಓಓಓ
       ರವಿಯು ಬಂದಾ ಉಷೆಯ ಕೆನ್ನೆಗೆ ರಂಗು ತಂದಾ
       ಎಂಥಾ ಚೆಲವೂ ಎಂಥಾ ಒಲವೂ ಆಹಾ ಅನುಬಂಧ

ಹೆಣ್ಣು: ಆಹಾಹ..     ಕೋರಸ್: ಓಹೋ..ಓಹೋಹೋ
ಹೆಣ್ಣು: ಆಹಾಹ..     ಕೋರಸ್: ಓಹೋ..ಓಹೋಹೋ
ಹೆಣ್ಣು: ಆಆಆ... ಕನ್ನಡ ದೇವಿ ಕರುಣೆ ತೋರಿ
ಕೋರಸ್: ಓಹೋ..ಓಹೋಹೋ
ಹೆಣ್ಣು: ಹಸಿರನುಟ್ಟ ಭೂಮಿ ನೀರೇ..
ಕೋರಸ್: ಓಹೋ..ಓಹೋಹೋ
ಹೆಣ್ಣು: ಕನ್ನಡ ದೇವಿ ಕರುಣೆ ತೋರಿ ಹಸಿರನುಟ್ಟ ಭೂಮಿ
           ನೀರೇ..ಕನ್ನಡ ನುಡಿಯ ಸುಧೆಯ ಧಾರೇ
           ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
           ಈ ಧರೆ...
           ಕನ್ನಡ ದೇವಿ ಕರುಣೆ ತೋರಿ ಹಸಿರನುಟ್ಟ ಭೂಮಿ
           ನೀರೇ..ಕನ್ನಡ ನುಡಿಯ ಸುಧೆಯ ಧಾರೇ
           ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
           ಈ ಧರೆ...ಓಓಓಓ... ಓಓಓಓ....
           ಹೋಯ್ ... ರವಿಯು ಬಂದಾ ಉಷೆಯ ಕೆನ್ನೆಗೆ ರ                   ತಂದಾ ಎಂಥಾ ಚೆಲವೂ ಎಂಥಾ ಒಲವೂ ಆಹಾ
           ಅನುಬಂಧ...
ಕೋರಸ್: ಲಲಲಾ..ಲಲಲಲಾ.. (ಆಅಆ) ಲಲಲಲಾ
                ಲಲಲಲಾ.. ಲಲಲಲಾ..
-----------------------------------------------------------------------

1 comment:

  1. ಎಂ.ರಂಗರಾವ್ ಅವರ ಸಂಗೀತ ಅತ್ಯಂತ ಸುಮಧುರ

    ReplyDelete