1675. ನಮ್ಮ ಕೋರಿಕೆಯ ಮಾಹಿತಿಗಳು

ನಮ್ಮ ಕೋರಿಕೆಯ ಮಾಹಿತಿಗಳು : 
           ನಿಮ್ಮ ಕೋರಿಕೆಯಂತೇ ನಮ್ಮ ಅಭಿಲಾಷೆ / ಕೋರಿಕೆಗಳು ಇವೆ. ಯಾಕೆಂದರೇ ನಮ್ಮ ಬಳಿ ನಿಮ್ಮ ಬಯಕೆಯ ಸಾಹಿತ್ಯ ಲಭ್ಯವಾಗದೇ ಹೋದಾಗ,  ನಮ್ಮಂತೇ ಕನ್ನಡ ಚಲನ ಚಿತ್ರದ ಹಾಡಿನ ಸಾಹಿತ್ಯದ ಬಗ್ಗೆ ಆಸಕ್ತಿಯುಳ್ಳವರೂ ಇದ್ದಾರೇ ಅಲ್ಲವೇ... ?  ದಯವಿಟ್ಟು ನಿಮ್ಮ ಬಳಿ ಇರುವ  ನಮ್ಮ ಕೋರಿಕೆಯ ಚಿತ್ರದ ಹಾಡಿನ ಸಾಹಿತ್ಯ ಲಭ್ಯವಿದ್ದರೇ ಅದು ಪುಸ್ತಕದ ರೂಪದಲ್ಲಿಯಾಗಲೀ , ಎಂಪಿ ೩ ಅಥವಾ ವಿಡಿಯೋಗಳಾಗಿದ್ದೀರೇ ನಮ್ಮ ಈ- ಮೇಲ್  ವಿಳಾಸಕ್ಕೆ  ಅಥವಾ ಈ ನಿಮ್ಮ ಜಾಲತಾಣಕ್ಕೆ ದಯವಿಟ್ಟು ಕಳುಹಿಸಿರಿ. ಇದರಿಂದ ನಿಮ್ಮ ಜಾಲತಾಣಕ್ಕೂ ಹಾಗೂ ಕನ್ನಡ ಅಭಿಮಾನಿಗಳಿಗೂ ಅವರ ಬಯಕೆಯ ಹಾಡಿನ ಸಾಹಿತ್ಯವನ್ನು ನಾವುಗಳೂ ಈಡೇರಿಸಿದಂತಾಗುತ್ತದೆ ಅಲ್ಲವೇ... ನಿಮ್ಮ ಕಡೇ ಈ ಕೆಳಗೆ ಕೊಟ್ಟಿರವ ಚಿತ್ರದ ಹಾಡಿನ ಸಾಹಿತ್ಯಗಳಿದ್ದರೇ ದಯವಿಟ್ಟು ಕಳುಹಿಸಿರಿ - ನಿಮ್ಮವನೇ ಸಂದೀಪ ಕುಲಕರ್ಣಿ 

ಶ್ರೀಕಾಂತ - ಈ ಕವನ ಈ ದಿನ ಏನೆಂದು ನಾ ಹಾಡಲಿ 
ರಕ್ಷಿತಾ - ರಣಧೀರ ಕಂಠೀರವ - ಸಂಚಾರಿ ಮನಸೋತೆ ಎನ್ನ ಮರೆಯದೆ (ಧನ್ಯವಾದಗಳು)
ಈ ತಾಣದಿಂದ - ಸವ್ವಾಲಿಗೇ ಸವ್ವಾಲ್ (೧೯೭೮) - ಎಂಥ ನೋಟ ಎಂಥ ಮಾತ
ಉಮಾ ಸೊಬರದ - ದಂಗೆ ಎದ್ದ ಮಕ್ಕಳು (೧೯೭೯) - ಈ ಚಿತ್ರದ (ಕಸ್ತೂರಿ ಶಂಕರ) ಹಾಡಿನ ಸಾಹಿತ್ಯ  
ಸಿ.ಆರ್.ಜಯ್ಯರ್ - ಭಲೇ ಭಾಸ್ಕರ್ (೧೯೭೧) - ಬನ್ನೀ ನನ್ನ ಗೆಳತಿಯರೇ- ವಸಂತ (ಧನ್ಯವಾದಗಳು)
ಈ ತಾಣದಿಂದ - ಆಯ್ ಲವ್ ಯು (೧೯೭೯) - ನಿನ್ನಂಥ ಗಂಡುಗಳೆಷ್ಟು ಬಂದರೂ




3 comments:

  1. ಹುಟ್ಟುಹಬ್ಬದ ಶುಭ ಕೋರುವ ಹಾಡುಗಳು

    ReplyDelete
  2. ಭಲೆ ಭಾಸ್ಕರ್ ೧೯೭೧ ಚಿತ್ರದ ’ಬನ್ನಿ ನನ್ನ ಗೆಳತಿಯರೆ’ ಹಾಡಿನ ಸಾಹಿತ್ಯ ಇಲ್ಲಿದೆ:

    ಚಿತ್ರ: ಭಲೆ ಭಾಸ್ಕರ್ ೧೯೭೧
    ಗಾಯನ: ಬಿ ವಸಂತ ಮತು ಕೋರಸ್
    ಸಂಗೀತ: ಸತ್ಯಂ
    ಸಾಹಿತ್ಯ: ಚಿ ಉದಯಶಂಕರ್

    ಲಲ್ಲಲ್ಲಾ ....
    ಬನ್ನಿ ನನ್ನ ಗೆಳತಿಯರೆ ಬನ್ನಿ ಬನ್ನಿ ನನ್ನವರೆ
    ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ
    ಲಲ್ಲಾಲ ಲ ಲ ಲ ಲಾ
    ಲಲ್ಲಾಲ ಲ ಲ ಲ ಲಾ
    ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ

    ಅಂದದಲ್ಲಿ ಲಲಲ್ಲ ಲಲ್ಲ
    ಚಂದದಲ್ಲಿ ಲಲಲ್ಲ ಲಲ್ಲ
    ಸ್ನೇಹದಲ್ಲಿ ಲಲಲ್ಲ ಲಲ್ಲ
    ಮೋಹದಲ್ಲಿ ಲಲಲ್ಲ ಲಲ್ಲ
    ಶಕ್ತಿಯಲ್ಲಿ ಯುಕ್ತಿಯಲ್ಲಿ..
    ಸಾಹಸದಲ್ಲಿ ಧೈರ್ಯದಲ್ಲಿ..
    ನಮ್ಮ ಸರಿಸಾಟಿ ಯಾರಿಲ್ಲ ಈ ನಾಡಲಿ.. /ಬನ್ನಿ/

    ಗಂಡಿಗೆ ಹೆಣ್ಣು ಲಲಲ್ಲ ಲಲ್ಲ
    ದಾಸಿಯಲ್ಲ ಲಲಲ್ಲ ಲಲ್ಲ
    ಕಣ್ಣಿನ ಬಲೆಗೆ ಲಲಲ್ಲ ಲಲ್ಲ
    ಬೀಳ್ವಳಲ್ಲ ಲಲಲ್ಲ ಲಲ್ಲ
    ಪ್ರಣಯಕೆ ಎಂದೂ ಸೋಲುವಳಲ್ಲ..
    ವಿರಹದಿ ಕರಗಿ ಕರಗುವಳಲ್ಲ..
    ನಮ್ಮ ಗೆಲಬಲ್ಲ ಭೂಪತಿಯು ಇನ್ನೂ ಹುಟ್ಟಿಲ್ಲ.. /ಬನ್ನಿ/

    ReplyDelete
  3. Sir ನನ್ನಲ್ಲಿ ಕೆಲವು ಚಿತ್ರಗಳ ಹಾಡು lyrics ಗಳು ಇರುವ ಚಿಕ್ಕ ಚಿಕ್ಕ ಪುಸ್ತಕಗಳು ಇವೆ ನೀವು ಹುಡುಕುತ್ತಿರುವ ಹಾಡು, ಚಿತ್ರಗಳ ಹೆಸರು ತಿಳಿಸಿ. ಇದ್ದರೆ ಕಳುಹಿಸುತ್ತೇನೆ. ವಾಟ್ಸಪ್ ಕಳುಹಿಸಿ.8762781253

    ReplyDelete