562. ಸ್ವಾತಿ ಮುತ್ತು (೨೦೦೩)

ಸ್ವಾತಿ ಮುತ್ತು ಚಿತ್ರದ ಹಾಡುಗಳು
  1. ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
  2. ರಾಮ ದಯಮಾಡೆಯ ..
  3. ಸುವ್ವಿ ಸುವ್ವಿ ನೀನೇ ನಮ್ಮ ಸೀತೆ ನಮ್ಮ
  4. ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ .
  5. ಮಾಂಗಲ್ಯ ತರತೀನಿ ಅಂತ ಆಆಆ ...
  6. ಮನಸು ಬರೆದ ಮಧುರ ಗೀತೆ
  7. ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ....  
  8. ಮಾಂಗಲ್ಯ 
  9. ಶ್ರೀ ಚಕ್ರಧಾರಿಗೇ  
ಸ್ವಾತಿ ಮುತ್ತು (೨೦೦೩) ಶ್ರೀ ಚಕ್ರಧಾರಿಗೆ 
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಚಿತ್ರಾ

ಲಾಲಿ ಲಾಲಿ...  ಲಾಲಿ ಲಾಲಿ    ಲಾಲಿ ಲಾಲಿ ... ಲಾಲಿ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ   ರಾಜೀವ ನೇತ್ರನಿಗೆ ರಮಣೀಯ ಲಾಲಿ ... ।।
ಹಾಲ್ಗೆನ್ನೆ ಕೃಷ್ಣನಿಗೆsss ಆಆಅ  .... ಹಾಲ್ಗೆನ್ನೆ ಕೃಷ್ಣನಿಗೆ .... ಹಾಲ್ಜೆನಾ ಲಾಲಿ 
ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ...  
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ    ರಾಜೀವ ನೇತ್ರನಿಗೆ ರಮಣೀಯ ಲಾಲಿ ... ।।
ಲಾಲಿ ಲಾಲಿ...  ಲಾಲಿ ಲಾಲಿ    ಲಾಲಿ ಲಾಲಿ ... ಲಾಲಿ ಲಾಲಿ

ಆಆಆಆಆ ... ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ
ಯದುವಂಶ ವಿಭುವಿಗೆ ಯೊಶೋಧೆ ಲಾಲಿ .... ।। ಪರಮೇಶ ಸುತನಿಗೇ....
ಪರಮೇಶ ಸುತನಿಗೇ.... ಪಾರ್ವತಿಯ ಲಾಲಿ..।। 
ಧರೆಯಾಳೊ ವರ್ಧಾಣಿಗೆ ಶರಣೆಂದೆ ಲಾಲಿ 
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ... ।।

ಜೋ ಜೋ .. ಜೋಜೋ ಜೋ.... ಜೋ  ಜೋ .. ಜೋಜೋಜೋ 
ಶ್ರೀ ಕನಕದಾಸರದು ಕೃಷನಿಗೆ ಲಾಲಿ... ।।  ಲಿಂಗಕ್ಕೆ ಜಂಗಮರ ವಚನಗಳ ಲಾಲಿ ..।।
ವೇದ ವೇದ್ಯರಿಗೆ ವೇದಾಂತ ಲಾಲಿ.. ।।   ಆಗಮ ನಿಗಮವೇ ಲಾಲಿ.. ಲಾಲಿ .. 
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ     ರಾಜೀವ ನೇತ್ರನಿಗೆ ರಮಣೀಯ ಲಾಲಿ ... ।।
ಹಾಲ್ಗೆನ್ನೆ ಕೃಷ್ಣನಿಗೆ .... ಹಾಲ್ಗೆನ್ನೆ ಕೃಷ್ಣನಿಗೆ .... ಹಾಲ್ಜೆನಾ ಲಾಲಿ 
ಜಗವಾಳೊ ಸ್ವಾಮಿಗೇ ಪದಮಾಲೆ ಲಾಲಿ...  
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ   ರಾಜೀವ ನೇತ್ರನಿಗೆ ರಮಣೀಯ ಲಾಲಿ ... ।।
ಹಾಲ್ಗೆನ್ನೆ ಕೃಷ್ಣನಿಗೆ .... ಹಾಲ್ಗೆನ್ನೆ ಕೃಷ್ಣನಿಗೆ .... ಹಾಲ್ಜೆನಾ ಲಾಲಿ 
ಲಾಲಿ ಲಾಲಿ...  ಲಾಲಿ ಲಾಲಿ    ಲಾಲಿ ಲಾಲಿ ... ಲಾಲಿ ಲಾಲಿ
--------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ಮಲಗಿರುವ ಭೂಮಿಗೆ

ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಡಾ.ಕೆ.ಜೆ.ಏಸುದಾಸ್

ಲಾಲಿ ಲಾಲಿ ಲಾಲಿಲಾಲಿ ಲಾಲಿ ಲಾಲಿ ಲಾಲಿಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಉಸಿರಾದ ಹೆಣ್ಣಿಗೆ ಉಸಿರೆಂದ ಲಾಲಿ ಈ ಪ್ರೇಮ ಮುಕ್ತಿಗೆ ಕಣ್ಣೀರೇ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಲಾಲಿ ಲಾಲಿ ಲಾಲಿಲಾಲಿ

ಕೈ ಹಿಡಿದು ನಡೆಸಿದೊಳು ಕೈವಲ್ಯಾ ಲಾಲಿ ಮಮತೆಯನ್ನೇ ಉಣಿಸಿದಳು ಮನಸಾರೇ ಲಾಲಿ
ಗುರುವಂತೆ ತಿದ್ದಿದಳು ನನ್ನ ನೆರಳೇ ಲಾಲಿ ಸಹನೆಯಲ್ಲಿ ಧರೆ ಇವಳು ತಂಗಾಳಿ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಚೇತನವ ಸೂಸಿದಳು ಜರಗಾನ ಲಾಲಿ ಶ್ರೀಗಂಧ ಆದವಳು ಶಿರಬಾಗಿ ಲಾಲಿ
ಪ್ರೀತಿ ನೀಡಿದಳು ನನ್ನ ಪ್ರಾಣ ಲಾಲಿ ಬದುಕನ್ನೇ ನೀಡಿದಳು ನನ್ನ ಬದುಕೇ ಲಾಲಿ
ಮಲಗಿರುವ ಭೂಮಿಗೆ ಚಂದಿರನ ಲಾಲಿ ಮಗುವಂತ ಮನಸಿಗೆ ಮುದ್ದಾದ ಲಾಲಿ
ಉಸಿರಾದ ಹೆಣ್ಣಿಗೆ ಉಸಿರೆಂದ ಲಾಲಿ ಈ ಪ್ರೇಮ ಮುಕ್ತಿಗೆ ಕಣ್ಣೀರೇ ಲಾಲಿ
ಲಾಲಿ ಲಾಲಿ ಲಾಲಿಲಾಲಿ ಲಾಲಿ ಲಾಲಿ ಲಾಲಿಲಾಲಿ

--------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ರಾಮ ದಯಮಾಡೆಯ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಎಸ್.ಪಿ.ಬಿ.

ರಾಮ ದಯಮಾಡೆಯ .. ।। ಶ್ರೀ ರಘುರಾಮ ತಡವೇಕಯ್ಯಾ ಆಆಅ ...ರಾಮ ದಯಮಾಡೆಯ .. ನಿಖಿಲಾ ಕುಮಾರಿ ನವಲಾವಣ್ಯ ನಾರಿ
ಧರಾಪುತ್ರಿ ಸುಮಗಾತ್ರಿ... ।।ನಿನ್ನ ನೋಡಿದಾಗ ರಾಮ ದಯಮಾಡೆಯಾ..
ಸೀತಾ ಸ್ವಯಂವರವನ್ನು ಏರ್ಪಡಿಸಿರುವಾಗ ಜನಕನ ಸಭೆಯಲ್ಲಿ ಜನಜಲಜನನಿ ನಡೆದು ಬಂದ ಜಾನಕಿಯನ್ನು
ಸಭಾ ಸಭರೆಲ್ಲ ಪದೇಪದೇ ನೋಡುತ್ತಿರಲಾಗಿ
ಶ್ರೀರಾಮಚಂದ್ರ ಮೂರ್ತಿ ಕಣ್ಣೆತ್ತಿ ನೋಡನೇನು ಅಂದು ಕೊಳ್ಳುತ್ತಿದ್ದಾರೆ ಸೀತಾದೇವಿಯ ಪರಿಚಾರಕಿಯರು
ರಾಮ ದಯಮಾಡೆಯಾ.. .. ।। ಶ್ರೀ ರಘುರಾಮ ತಡವೇಕಯ್ಯ... ರಾಮ ದಯಮಾಡೆಯಾ..

ನಿಖಿಲಾಕುಮಾರಿ ನವಲಾವಣ್ಯ ನಾರಿ ..ಆಅಅ ನಿಖಿಲಾಕುಮಾರಿ ನವಲಾವಣ್ಯ ನಾರಿ ಧರಾಪುತ್ರಿ ಸುಮಗಾತ್ರಿ..
ಧರಾಪುತ್ರಿ ಸುಮಗಾತ್ರಿ ನಿನ್ನ ನೋಡಿದಾಗ... ರಾಮ ದಯಮಾಡೆಯಾ.. .. ।।
ಹದಿ ಹದಿ ಹರೆಯದ ರಸಿಕ ಮಹಾಶಯರು ಸಾನಿದಪನಿಮಗರಿಸ ಪರಿ ಪರಿ ವೇಷದ ಪ್ರಣಯದ ಪರಿಣಕರು .. ತಕಜನು ಹದಿ ಹದಿ ಹರೆಯದ ರಸಿಕ ಮಹಾಶಯರು ಸಾನಿದಪನಿಮಗರಿಸ ಪರಿ ಪರಿ ವೇಷದ ಪ್ರಣಯದ ಪರಿಣಕರು ತಕಜನು ತಕಧಿಮಿ
ವೇದವನು ಓದಿದ ವಿಧ್ವತಿವಿಚಾರರು ನಿದಮಪಮ ಗರಿಗರಿನಗ ರಣದಲಿ ಕಾದಿದ ವೀರ ಪರಾಕ್ರಮರು ಆಹ್ಹಹ...
ರತಿಯೇ ಧರೆಗಳಿದಂತೆ ಆ ಸೀತೆ ಬರುತಿರುವಾಗ
ಸೀತೆಯೆಡೆಗೆ ಶಿವಧನಿಸಿನಡೆಗೆ ಎದೆ ಇಕ್ಕನಂತೆ ಸಭಿಕರೆಲ್ಲ ನೋಡಲು
ರಾಮ ದಯಮಾಡೆಯಾ.. ರಾಮ ದಯಮಾಡೆಯಾ..
ಮುರಿದೆವು ಅಂತ ಮೇಲೆದ್ದು ನಿಂತ ಯುವರಾಜರಿಲ್ಲ ಎಷ್ಟೋ ಎಷ್ಟೆಷ್ಟೋ
ಗೆಲುವಿನ್ನು ನಮ್ಮ ಅಡಿ ಆಳು ಎಂದು ನೆಲದಲಿ ಬಿದ್ದವರು ಎಷ್ಟೋ
ಮುರಿದೆವೋ ಅಂತ ಮೇಲೆದ್ದು ನಿಂತ ಯುವರಾಜರಿಲ್ಲ ಎಷ್ಟೋ ಇಲ್ಲಿ ಎಷ್ಟೋ
ಬಿಲ್ಲ ಎತ್ತದಂತೆ ತಲೆ ಎತ್ತದಂತೆ ದಿಕ್ಕೆಟ್ಟು ಓಡಿದವರ ಎಷ್ಟೋ
ತಮ್ಮ ದೇಹ ನಡುಗಿ ಆಕೋಭ್ಯ ಉಡುಗಿ ನೀರು ಕುಡಿದ ನರರ ಎಷ್ಟೋ
ಎತ್ತೋರ ಇಲ್ಲವೇನು ಬಿಲ್ಲನೆತ್ತಿ ಮುರಿಯೋರ ಇಲ್ಲವೇನು... ೪ ಸಲ
ಕೊರಸ : ರಾಮಯಾ ರಾಮಭಧ್ರಾಯಾ ರಾಮಚಂದ್ರಾಯ ನಮಃ
ಗಂಡು : ಶ್ರೀರಾಮ ಮೇಲೆದ್ದ ನಿಂತುಕೊಂಡ ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ
ಕೊರಸ: ಶ್ರೀರಾಮ ಮೇಲೆದ್ದ ನಿಂತುಕೊಂಡ ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ
ಗಂಡು : ಸೀತೆಯೆಡೆಗೆ ವಾರಿನೋಟ ಬೀರುತಾನೆ.. ।। ಒಂದು ಬೆರಳಿನಲ್ಲಿ ಬಿಲ್ಲನೆತ್ತಿ ನಿಲ್ಲುತ್ತಾನೆ ... ।।
ಪಢ ಪಢ ಪಢ ಪಢ ಪಢ ಪಢ ಮುರಿಯಿತು ಶಿವಧನವು ಸಭೆ ನುಡಿಯಿತು ಸೀತೆ ನವವಧುವು
ಜಯ ಜಯ ರಾಮ ರಘುಕುಲ ಸೋಮ ದಶರಥ ರಾಮ ಜಾನಕಿ ರಾಮ
ಜಯ ಜಯ ರಾಮ ರಘುಕುಲ ಸೋಮ ದಶರಥ ರಾಮ ಜಾನಕಿ ರಾಮ
ಹೆಣ್ಣು : ಸೀತಾ ಕಲ್ಯಾಣ ವೈಭೋಗವೋ ಶ್ರೀರಾಮ ಕಲ್ಯಾಣ ವೈಭೋಗವೋ.. ।।
ವಿಜಯ ವಿಜಯ ವಿಜಯೀಭವಃ ವಿಜಯ ವಿಜಯ ವಿಜಯೀಭವಃ
ಸುಗುಣ ಗುಣಕೆ ವಿಜಯೀಭವಃ ಸೀತಾ ಕಲ್ಯಾಣ ವೈಭೋಗವೋ ಶ್ರೀರಾಮ ಕಲ್ಯಾಣ ವೈಭೋಗವೋ..
ಗಂಡು : ಶ್ರೀರಾಮ ಅಲ್ಲಿ ನೋಡೆಯಾ ನಿಖಿಲಾ ಕುಮಾರಿ ನವಲಾವಣ್ಯ ನಾರಿ ಧರಾಪುತ್ರಿ ಸುಮಗಾತ್ರಿ... ।।
ನಿನ್ನ ನೋಡಿದಾಗ ರಾಮ ದಯಮಾಡೆಯಾ.. ಶ್ರೀ ರಘುರಾಮ ತಡವೇಕಯ್ಯಾ ಆಅಅ ರಾಮ ದಯಮಾಡಯ
------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ರಾಮ ದಯಮಾಡೆಯ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ಚಿತ್ರಾ 

ಗಂಡು : ಆ... ಆ... ಆ... ಆ... ಅ     ಹೆಣ್ಣು : ತುಂಬಾ ಚೆನ್ನಾಗಿ ಹಾಡ್ತೀರಲ್ಲಾ ತನನನಾ ತಾನಾನಾ ತದರೀ.... ನಾಆ.. 
ಗಂಡು : ಸುವ್ವಿ ಸುವ್ವಿ ನೀನೇ ನಮ್ಮ ಸೀತೆ ನಮ್ಮ     ಹೆಣ್ಣು : ಆಹಾ! 
ಗಂಡು : ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮಾ .. ಸುವ್ವಿ ಸುವ್ವಿ ನೀನೇ ನಮ್ಮ ಸೀತೆ ನಮ್ಮ .. 
ಇಬ್ಬರು : ಟುವ್ವಿ ಟುವ್ವಿ      ಹೆಣ್ಣು : ಹಕ್ಕಿಯಂತೆ ನಗಬೇಕಮ್ಮಾ .. ಸುವ್ವಿ ಸುವ್ವಿ ನೀನೇ ನಮ್ಮ ಸೀತೆ ನಮ್ಮ .. 
ಗಂಡು : ಸುವ್ವಿ ಸುವ್ವಿ   ಸುವ್ವಿ ಸುವ್ವಿ     ಹೆಣ್ಣು : ಸುವ್ವಿ ಸುವ್ವಿ ಸುವ್ವಿ ಸುವ್ವಿ
ಇಬ್ಬರು : ನೀನೇ ನಮ್ಮ ಸೀತೆ ನಮ್ಮ ..

ಗಂಡು : ಓ... ಗಂಡ ದೇವ ಅಂದುಕೊಂಡೇ ಕೋದಂಡರಾಮನ ನಂಬಿಕೊಂಡೇ
ಹೆಣ್ಣು : ಗಂಡ ದೈವ ಅಂದುಕೊಂಡೇ ಕೋದಂಡರಾಮನ ನಂಬಿಕೊಂಡೇ
ಗಂಡು :  ಕಂಡೋರು ಆಡೋ ನುಡಿ ಕೇಳಿ ನಿನ್ನ ಕೊಂಡಾರಣ್ಯಕೇ ದೂಡಿದನೇ
ಹೆಣ್ಣು : ಕಂಡೋರು ಆಡೋ ನುಡಿ ಕೇಳಿ
ಗಂಡು :  ಕಂಡೋರು ಆಡೋ ನುಡಿ ಕೇಳಿ ನಿನ್ನ ಕೊಂಡಾರಣ್ಯಕೇ ದೂಡಿದನೇ
             ಬೆಂಕಿಯಲ್ಲಿ ಬಿದ್ದು ಯಾವ ಸೋಂಕೆ ಇಲ್ಲದೆ ಹೂವಂತೆ 
             ಎದ್ದು ಗೆದ್ದೇ ಗೆಲ್ಲದೇ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ 
ಹೆಣ್ಣು : ಎದ್ದು ಗೆದ್ದೇ ಗೆಲ್ಲದೇ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ .. ।।
ಹೆಣ್ಣು : ಸುವ್ವಿ ಸುವ್ವಿ ಸುವ್ವಿ ಸುವ್ವಿ           ಗಂಡು : ಸುವ್ವಿ ಸುವ್ವಿ   ಸುವ್ವಿ ಸುವ್ವಿ ನೀನೇ ನಮ್ಮ ಸೀತೆ ನಮ್ಮ ..
             
ಗಂಡು : ಅಕ್ಕಪಕ್ಕ ಹಕ್ಕಿಗಳೇ ನಿನ್ನ ಅಕ್ಕ ತಂಗಿ ಅಂದುಕೊಳ್ಳೇ
            ಅಕ್ಕಪಕ್ಕ ಹಕ್ಕಿಗಳೇ ನಿನ್ನ ಅಕ್ಕ ತಂಗಿ ಅಂದುಕೊಳ್ಳೇ
            ಸ್ವಾತಿಯ ಹಾಗಿದೆ ಕಣ್ಣೀರು ನಾಳೆ ಮುದ್ದಾಗಿ ಬರುತಾವೆ ಸುಮ್ಮನಿರು
            ಸ್ವಾತಿಯ ಹಾಗಿದೆ ಕಣ್ಣೀರು ನಾಳೆ ಮುದ್ದಾಗಿ ಬರುತಾವೆ ಸುಮ್ಮನಿರು
            ನಿನ್ನಯ ಗ್ರಹಣ ಸರಿದು ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
            ನಾಳೆ ಸುಖವಾ ಕೊಡುತಾನೆ  ದೇವರು ಜೊತೆಯಲಿ ಇರುತಾನೆ
ಹೆಣ್ಣು : ನಾಳೆ ಸುಖವಾ ಕೊಡುತಾನೆ  ದೇವರು ಜೊತೆಯಲಿ ಇರುತಾನೆ
ಗಂಡು : ಸುವ್ವಿ ಸುವ್ವಿ   ಸುವ್ವಿ ಸುವ್ವಿ 
--------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ಅಂದದ ಚಂದದ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ನಂದಿತಾ  

ಗಂ : ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ .. ।।।
        ಅಮ್ಮ ಈಗ ಗುಮ್ಮನಂತೆ ನೋಡು ಅಮ್ಮ ನನ್ನ ಹೊಡಿತಾಳೆ ನೋಡು
        ಹೋಗ್ಲಿ ಬಿಡು ಓ ಮಾಧವ ಪ್ರೀತಿ ಮಾಡಲು ನಾ ನಿಲ್ಲವಾ 
        ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..
        ಕೃಷ್ಣನು ಕಾಣದೇ ನಿದೆರೆ ಇಲ್ಲದೆ ತಾಯಿ ಸಹ ದಂಗಿಸಿ ಕಳವಳಗೊಂಡಿರಲು 
        ಬೆಣ್ಣೆಯ ಕದಿಯಲು ಹೋದೆಯಾ ನೀನು ಮಣ್ಣನು ತಿನ್ನುತ ಅಡಗಿದೆ ಏನು
        ಅಮ್ಮ ಮಣ್ಣು ತಿಂದ ಮುಕುಂದ ನೋಡಮ್ಮಾ ಬಾರಮ್ಮಾ ಬಾಯಿ ತೆಗೆಸಿ ನೋಡು...ಆಆಆ
        ಗೆಳೆಯ ಮಕರಂದ..ಅಆಆಆ ಗೆಳೆಯ ಮಕರಂದ ತಾಯಿನ ನಂಬಿಸಿದ
        ಚಾಡಿಯ ಹೇಳಿದನು ತಾಯಿ ಕೈಯಲ್ಲೇ ಹೊಡೆಸಿದನು ಅಳು ಬರುತಿದೆ ನಂಗೆ ಅಳುಬರ್ತಿದೆ
        ಮನೆ ಬಿಟ್ಟು ಹೋದರೆ ಎಲ್ಲಿ ಹೋಗಿ ಮಲಗಲಿ,  ತಾಯಿ ಬಿಟ್ಟು ಹೋದರೆ ಹೇಗೆ ತಾನೇ ಬದುಕಲಿ
        ಅಮ್ಮನ ಜೊತೆ ಇರುವೆ ಬೇರೆ ಏನು ಬೇಡ ಎನ್ನುವೆ ಮುದ್ದಿಸೋ ದೈವವೇ ಹೊಡೆದರು ಸಹಿಸುವೆ
        ಹೊಡಿ ಹೊಡಿ ಅಮ್ಮ ಇನ್ನೂ ಸಹಿಸುವೆ ಹೊಡಿ ಹೊಡಿ ಅಮ್ಮ ಇನ್ನೂ ಹೊಡಿ  ಚೆನ್ನಾಗಿ ಹೊಡಿ ಹೊಡಿ
        ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..

ಹೆ : ಚಿಕ್ಕವನಾದರೂ ಕೈ ಎತ್ತಿ ಹೊಡೆಬಹುದು ದೊಡ್ಡವನಾಗಿದ್ದರೆ ದಡ್ಡತನ ತಿದ್ದಬಹುದು
      ಯೋಶದೇ ನಾನ್ ಅಲ್ಲವೋ ನಿನ್ನನ್ನು ದಂಡಿಸಲು ದೇವತೆ ನಾನ್ ಅಲ್ಲವೋ ನಿನ್ನನ್ನು ದಂಡಿಸಲು
      ನೀನು ಯಾರೆಂದು.... ನೀನು ಯಾರೆಂದು ನನ್ನನ್ನು ಕೆಳದಿರು
      ಗಂಡ ಇಲ್ಲವೆಂದು ಬಿಟ್ಟು ಹೋಗದಿರು  ನನ್ನ ಬಿಟ್ಟು ಹೋಗದಿರು  ಗಂಡು : ಹಾ ಹೂಂ ಹೂ ಹೋಗದಿಲ್ಲಮ್ಮಾ
ಹೆ : ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ .. ಅಮ್ಮ ಈಗ ಗುಮ್ಮನಂತೆ ನೋಡು
      ಅಮ್ಮ ನಿನ್ನ ಹೊಡಿತಾಳೆ ನೋಡು ... ।।
ಗಂ :   ಹೋಗ್ಲಿ ಬಿಡು ಓ ಮಾಧವ ಪ್ರೀತಿ ಮಾಡಲು ನಾ ನಿಲ್ಲವಾ
ಹೆ : ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..
--------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ಮಾಂಗಲ್ಯ ತರತೀನಿ 
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ಮಂಜುಳಾ ಗುರುರಾಜ

ಹೆ : ಮಾಂಗಲ್ಯ ತರತೀನಿ ಅಂತ ಆಆಆ ...
      ಮಾಂಗಲ್ಯ ತರತೀನಿ ಅಂತ ಆಆಆ ... ಮಂಗಳೂರಿಗೆ ಹೋಗೊವನೇ ಮಾಮ ...
      ಮುಂಜಾನೆ ಮೂಡಿದರೂ ನನ್ನಾಣೆ ಹೋಗದಿರು ಚಕ್ಕುಲಿ ಮಾಮಾ ಚಂದ ಮಾಮಾ ..।।
      ಧಾರೆ ಸೀರೆ ತರತೀನಿ ಅಂತ ಧಾರಾವಾಡಕೆ ಹೋಗುವನೆ ಮಾಮಾ
ಗಂ : ಧಾರೆ ಸೀರೆ ತರತೀನಿ ಅಂತ ಧಾರಾವಾಡಕೆ ಹೋಗುವನೆ        ಇಬ್ಬರು : ಮಾವಾ.... ಆಆಆ

ಹೆ : ದಾರಿಗೆ ಬೆಳಕು ಚೆಲ್ಲು ಹೊತ್ತಾರೆ ವರೆಗೂ ನಿಲ್ಲು ಚಂದಕೆ ಮಾಮ ಚಂದ ಮಾಮಾ
ಗಂ : ಚಂದಕೆ ಮಾಮ ಚಂದ ಮಾಮಾ ಚಂದಕೆ ಮಾ...
-------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ಮನಸು ಬರೆದ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ಚಿತ್ರಾ
     
ಹೆ : ಮನಸು ಬರೆದ    ಗಂ : ಮನಸು ಬರೆದ
ಹೆ : ಮಧುರ ಗೀತೆ     ಗಂ : ಮಧುರ ಗೀತೆ
ಹೆ : ಮನಸು ಬರೆದ ಮಧುರಗೀತೆ ನೀನೇ ಹರೆಯ ಸುರಿದ ಗೀತೆ
ಗಂ : ಹರೆಯ ಸುರಿದ   ಹೆ :ಸ್ವಾತಿಮುತ್ತು     ಗಂ :ಸ್ವಾತಿಮುತ್ತು
ಹೆ : ಹರೆಯ ಸುರಿದ ಸ್ವಾತಿಮುತ್ತು ನೀನೇ ಕವಡೆಯೊಳಗೆ ಹನಿಯ ಬೆಸುಗೆ
      ಕವಡೆಯೊಳಗೆ ಹನಿಯ ಬೆಸುಗೆ  ಮುತ್ತು ಹಲವು ಬಗೆ
ಗಂ  : ಮನಸು ಬರೆದ ಮಧುರಗೀತೆ ನೀನೇ   ಹೆ :  ಹರೆಯ ಸುರಿದ ಸ್ವಾತಿಮುತ್ತು ನೀನೆ

ಹೆ : ಶಿವನ ಶಾಂಭವಿ ಸೇರಲು ಜನನವಾಯಿತು ಶೋಭನ    ಗಂ : ಜನನವಾಯಿತು ಶೋಭನ
ಹೆ : ನಾವು ಸವಿದೆವು ಈ ದಿನ ನಾವು ಸವಿದೆವು ಈ ದಿನ       ಗಂ : ನಾವು ಸವಿದೆವು ಈ ದಿನ
ಹೆ : ತನುವು ಜ್ವಾಲೆಯನು ತಣಿಸೋ ನಾಲೆಯಿದು ಅಣುವು ಅಣುವು   ಗಂ : ಅಣುವು ಅಣುವು
ಹೆ : ಬೆಸೆದುಕೊಳ್ಳಲಿ                           ಗಂ  : ಬೆಸೆದುಕೊಳ್ಳಲಿ
ಹೆ : ಅಣುವು ಅಣುವು ಬೆಸೆದುಕೊಳ್ಳಲಿ    ಗಂ  : ಬೆಸೆದುಕೊಳ್ಳಲಿ
ಹೆ : ಅಣುವು ಅಣುವು ಬೆಸೆದುಕೊಳ್ಳಲಿ    ಏಳು ಜನ್ಮದಲಿ
ಗಂ : ಮನಸು ಬರೆದ ಮಧುರಗೀತೆ       ಹೆ : ನೀನೆ
ಗಂ : ಹರೆಯ ಸುರಿದ   ಸ್ವಾತಿಮುತ್ತು  ಹೆ :ನೀನೇ... 

ಹೆ : ರೋಮ ರೋಮ ಮಾಡಿದೆ ಪ್ರೇಮಕಾಮದ ನರ್ತನ        ಗಂ: ಪ್ರೇಮಕಾಮದ ನರ್ತನ   
ಹೆ : ದೇಹದಲ್ಲಿ ಆರದ ಮಂಗಳಾರತಿ ಚೇತನ        ಗಂ:  ಮಂಗಳಾರತಿ ಚೇತನ
ಹೆ : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ  ಗಂ: ಹೆ : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ
ಹೆ : ಯುಗವೇ ಕ್ಷಣವೂ    ಗಂ : ಯುಗವೇ ಕ್ಷಣವೂ    ಹೆ: ಆಗಿಬಿಡಲಿ     ಗಂ: ಆಗಿಬಿಡಲಿ
ಹೆ : ಯುಗವೇ ಕ್ಷಣವೂ ಆಗಿಬಿಡಲಿ ಬಾಹುಬಂಧದಲಿ
ಗಂ :  ಮನಸು ಬರೆದ    ಹೆ : ಮನಸು ಬರೆದ
ಗಂ : ಮಧುರ ಗೀತೆ      ಹೆ :  ಮಧುರ ಗೀತೆ
ಗಂ : ಮನಸು ಬರೆದ ಮಧುರಗೀತೆ ನೀನೆ
ಹೆ : ಹರೆಯ ಸುರಿದ    ಗಂ: ಹರೆಯ ಸುರಿದ     ಹೆ: ಸ್ವಾತಿಮುತ್ತು   ಗಂ: ಸ್ವಾತಿಮುತ್ತು  
ಹೆ : ಹರೆಯ ಸುರಿದ ಸ್ವಾತಿಮುತ್ತು ನೀನೆ....
ಗಂ :  ಕವಡೆಯೊಳಗೆ ಹನಿಯ ಬೆಸುಗೆ  ಮುತ್ತು ಹಲವು ಬಗೆ

-------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) ಅಮ್ಮಾ ಧರ್ಮಾ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ಚಿತ್ರಾ

ಕೋರಸ್ :  ಸಾಸ ಸಸ ಸಸ ಸರಿಗಮ ಪಪಪಮಗರಿ ಸಾಸ ಸಸ ಸಸ ಸರಿಗಮ ಪಪಪಮಗರಿ
                ಸಾಸ ಸಸ ಸಸ ಸರಿಗಮ ಪಪಪಮಗರಿ ಸಾಸ ಸಸ ಸಸ ಸರಿಗಮ ಪಪಪಮಗರಿ
               ಸಾಸ ರಿರೀ ಮಮ ಗಮಪ ಸಸ ಗಗ ರಿರಿ ಮಮ ಪದನಿಸ ಸಸ ಸಸ ಸಸ ಸಸ
ಗಂಡು :  ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
             ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
             ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
             ಈಶ್ವರ ನೀನೆ...  ಈಶ್ವರ ನೀವೇ ಏಸು ನೀವೇ  ಅಲ್ಲಾ ನೀವೇ ಎಲ್ಲನೂ  ನೀವೇ  ...
            ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....

ಗಂಡು : ನಾವು ಬಿಕ್ಷೆಯ ಬೇಡೋ ತಿರುಕರು ನೀವು ರಕ್ಷೆಯ ನೀಡುದೇವರು
           ನಾವು ಬಿಕ್ಷೆಯ ಬೇಡೋ ತಿರುಕರು ನೀವು ರಕ್ಷೆಯ ನೀಡುದೇವರು
           ಬೀದಿಯಲಿ ಬಿಟ್ಟರು ಹೆತ್ತವರು.. ನಾ ಹೊತ್ತಿನ ತುತ್ತಿಗೂ ಅತ್ತವರು .. 
ಎಲ್ಲರು : ಅಮ್ಮ ಕೊಡಿ ಅನ್ನ ಕೊಡಿ ಅಮ್ಮ ಕೊಡಿ ಅನ್ನ ಕೊಡಿ
         ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
         ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
ಕೋರಸ್ : ಆಆಆಅ... ಆಆಆಅ...

ಕೋರಸ್ : ಆಆಆಅ... ಆಆಆಅ...
ಗಂಡು :  ಗೂಡು ಇಲ್ಲದೇ ಬಾಡಿ ಹೋದೆವು...
             ಗೂಡು ಇಲ್ಲದೇ ಬಾಡಿ ಹೋದೆವು... ಭೂಮಿಗೂ ಕೂಡ ಭಾರವಾದೆವು
            ಎಷ್ಟೋ ಬಾಗಿಲ ಮಡಿದವರು  ಎಷ್ಟೋ ಕಾಲುಗಳ ಮುಗಿದವರು.... 
ಎಲ್ಲರು : ಅಮ್ಮ ಕೊಡಿ ಅನ್ನ ಕೊಡಿ ಅಮ್ಮ ಕೊಡಿ ಅನ್ನ ಕೊಡಿ
ಗಂಡು : ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
            ಅಮ್ಮಾ ಧರ್ಮಾ ನೀಡಮ್ಮಾ  ಅಯ್ಯಾ ದಾನಾ ಮಾಡಯ್ಯಾ ....
--------------------------------------------------------------------------------------------------------------------------

ಸ್ವಾತಿ ಮುತ್ತು (೨೦೦೩) - ಮಾಂಗಲ್ಯ
ಸಂಗೀತ : ರಾಜೇಶ ರಮಾನಾಥ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ರಾಜೇಶ ಮತ್ತು ಮಂಜುಳಾ ಗುರುರಾಜ

ಹೆಣ್ಣು : ಮಾಂಗಲ್ಯ ತರತೀನಿ ಅಂತ...  ಆಆಆ... ಓಓಓಓಓ... ಆಆಆಅ..
          ಮಾಂಗಲ್ಯ ತರತೀನಿ ಅಂತ.ಮಂಗಳೂರಿಗೇ ಹೋಗ್ವವನೇ ಮಾಮಾ ... ಆಆಆ
          ಮಾಂಗಲ್ಯ ತರತೀನಿ ಅಂತ.ಮಂಗಳೂರಿಗೇ ಹೋಗ್ವವನೇ ಮಾಮಾ ... ಆಆಆ
          ಮುಂಜಾನೇ ಮೂಡಿದರೂ ನನ್ನಾಣೆ ಹೋಗದಿರೂ ಚಕ್ಕುಲಿ ಮಾವಾ ಚಂದಮಾಮ 
         ಚಕ್ಕುಲಿ ಮಾಮ ಚಂದಮಾಮ ತನ್ನನನನನನಾ ರೀನಾ.. ತನ್ನನನನ ಅಹ್ಹಹ್ಹಹಹ .. 
         ಧಾರೇ ಸೀರೆ ತರಿತಿನಂತಾ ಧಾರವಾಡಕ್ಕ ಹೋಗೋನ್ನೇ ಮಾಮಾ... ಆಆಆ 
ಗಂಡು : ಧಾರೇ ಸೀರೇ ತರೀತಿನೀ ಅಂತಾ ಧಾರಾವಾಡಕ್ಕ ಹೋಗೋನ್ನೇ 
ಇಬ್ಬರು : ಮಾವಾ ಆಆಆ 
ಹೆಣ್ಣು : ದಾರಿಗೆ ಬೆಳಕು ಚೆಲ್ಲೂ ಹೊತ್ತಾರವರೆಗೂ ನಿಲ್ಲೂ ಚಂದಕ್ಕಿ ಮಾಮ ಚಂದಮಾಮ  
ಗಂಡು : ಚಂದಕ್ಕಿ ಮಾಮಾ ಓಯ್ ಚಂದಮಾಮ ಚಂದಕ್ಕಿ ಮಾ.. ಒವ್ ..           
--------------------------------------------------------------------------------------------------------------------------

1 comment:

  1. ಬೆಸುಗೆ ಸಿನಿಮಾದ ಹಾಡು ಬೇಕು.

    ReplyDelete