1037. ಲಕ್ಷ್ಮಿ ಪ್ರಸನ್ನ (೧೯೮೧)





ಲಕ್ಷ್ಮಿ ಪ್ರಸನ್ನ ಚಿತ್ರದ ಹಾಡುಗಳು 
  1. ಕುಳುಕಿ ಬಳುಕಿ ನಡೆಯೋ ಹೆಣ್ಣು 
  2. ಮಧುರ ಸಂಗಮ ಮಿಲನ  
  3. ಮಾತಿನ್ನೇಕೆ ಬೇಕು 
  4. ಗಾಳಿಯು ನಲಿದಿದೆ 
ಲಕ್ಷ್ಮಿ ಪ್ರಸನ್ನ (೧೯೮೧)
ಸಂಗೀತ : ಪೆಂಡಾಲ್ ಶ್ರೀನಿವಾಸನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ 

ಕುಲುಕಿ ಬಳುಕಿ ನಡೆಯೋ ಹೆಣ್ಣು ನೋಡಿಲ್ಲಿದೆ 
ಹರೆಯ ತಂದ ಅಂದ ಚಂದ ಮೈತುಂಬಿದೆ 
ಕುಲುಕಿ ಬಳುಕಿ ನಡೆಯೋ ಹೆಣ್ಣು ನೋಡಿಲ್ಲಿದೆ
ಹರೆಯ ತಂದ ಅಂದ ಚಂದ ಮೈತುಂಬಿದೆ 
ಕಾದು ಕಾದು  ಸೋತೆ ನಾನು ಆಸೆಯಿಂದ ಬಂದೆ ನಾನು
ಬಾರೋ ಬಾರೋ ಮಾವಯ್ಯಾ ಬಿಂಕ ಏಕೋ ಹೇಳಯ್ಯಾ 
ಹ್ಹಾಂ..   ಬಾರೋ ಬಾರೋ ಮಾವಯ್ಯಾ ಬಿಂಕ ಏಕೋ ಹೇಳಯ್ಯಾ 

ನಿನಾಗಾಗಿ ನನ್ನ ಯೌವ್ವನ ನೀ ಇರದೇ ಬರಿದು ಜೀವನ 
ನಿನಾಗಾಗಿ ನನ್ನ ಯೌವ್ವನ ನೀ ಇರದೇ ಬರಿದು ಜೀವನ 
ದುಂಬಿ ನೀ... ಹೂವೂ  ನಾ.. ಹಹ್ಹಹ್ಹಾ..  ಬರುವೇ ನೀ... ಬಳ್ಳಿ ನಾ
ಆಸರೆ ನೀಡಿದ... ಆಸರೆ ನೀಡಿದ ಕರೆದರೇ ಮರೆಯದೆ
ಬರ ಬರ ಬರ ಈ ದಿನ 
ಬಾರೋ ಬಾರೋ ಮಾವಯ್ಯಾ ಹೊಯ್ ಬಿಂಕ ಏಕೋ ಹೇಳಯ್ಯಾ
ಆಹ್ಹ.   ಬಾರೋ ಬಾರೋ ಮಾವಯ್ಯಾ ಹ್ಹಾಂ..   ಬಿಂಕ ಏಕೋ ಹೇಳಯ್ಯಾ 

ಸಂಗಾತಿ ತಾಳದಂತೆ ರೂಪು ಸಾವಿರ 
ಸಂಗಾತಿ ತಾಳದಂತೆ ರೂಪು ಸಾವಿರ ಈ ದಿನ ಆದರ ಈ ದಿನ ಆದರ 
ಸರಸ ಸಲ್ಲಾಪ ಬಯಸಿ ನಿನ್ನಲ್ಲಿ ಅರಿತು ಎಲ್ಲೆಲ್ಲೂ ಬಂತು ನಾನಿಲ್ಲಿ ಇಂದು 
ವಿರಹ ತಂದ್ರಿಪ್ಪ ಇರುವ ಮೈಯೆಲ್ಲಾ ಹೊರಸು ನೀನೆಂದು ಬೇಗ ನನ್ನತ್ತ ಬಂದು 
ನಲ್ಮೆಯ ಮಧುವನು ಹೀರಲು ಈಗಲೇ ಇಲ್ಲಿ ಬಾ 
ಫಲವನು ಚಿಲುಮೆಯ ಸವಿಯುತ ನನ್ನನು ಮರೆಸಿ ಬಾ 
ಕರೆದರೇ ಮರೆಯದೆ ಬರ ಬರ ಬರ ಈ ದಿನ
ಬಾರೋ ಬಾರೋ ಮಾವಯ್ಯಾ ಹೊಯ್ ಬಿಂಕ ಏಕೋ ಹೇಳಯ್ಯಾ
ಆಹ್ಹ.   ಬಾರೋ ಬಾರೋ ಮಾವಯ್ಯಾ ಹ್ಹಾಂ..   ಬಿಂಕ ಏಕೋ ಹೇಳಯ್ಯಾ..  ಆಂ 
--------------------------------------------------------------------------------------------------------------------------

ಲಕ್ಷ್ಮಿ ಪ್ರಸನ್ನ (೧೯೮೧)
ಸಂಗೀತ : ಪೆಂಡಾಲ್ ಶ್ರೀನಿವಾಸನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.  ಎಸ್.ಜಾನಕೀ 

ಗಂಡು : ಮಧುರ ಸಂಗಮ ಮಿಲನ ಸಂಭ್ರಮ 
          ಮಧುರ ಸಂಗಮ ಮಿಲನ ಸಂಭ್ರಮ
          ಇದು ಮರೆಲಾಗಿ ಹಗಲೊಂದು ಬಂತು          
          ಇದು ಮರೆಲಾಗಿ ಹಗಲೊಂದು ಬಂತು          
         ನವಜೀವನದ ಸಂತಸವ ಕಂಡೆ  
ಇಬ್ಬರು : ಮಧುರ ಸಂಗಮ ಮಿಲನ ಸಂಭ್ರಮ ಮಧುರ ಸಂಗಮ 

ಗಂಡು : ನಿನ್ನ ಮೊಗದಲ್ಲಿ ನಾನಿಂದು  ಕಂಡೇ ಮುಗ್ದ  ಮನಸೊಂದ ತಿಳಿ ನೀರ ಛಲವ
           ನಿನ್ನ ಮೊಗದಲ್ಲಿ ನಾನಿಂದು ಕಂಡೇ ಮುಗ್ದ ಮನಸೊಂದ ತಿಳಿ ನೀರ ಛಲವ
ಹೆಣ್ಣು : ನಿನ್ನ ನಗುವಲ್ಲಿ ನಾನಿಂದು ಕಂಡೇ  ಪ್ರೇಮ ಸುಧೆ ತೀಡಿ ನಗುವಂತ ಹೂವ 
ಗಂಡು : ಬೆರೆತು ನಾವಿಂದು ಮರೆತೆಲ್ಲ ನೋವ 
           ಬೆರೆತು ನಾವಿಂದು ಮರೆತೆಲ್ಲ ನೋವ ಆಡುವಾ ಹಾಡುವಾ
           ಆಡುವಾ ಹಾಡುವಾ
ಇಬ್ಬರು : ಮಧುರ ಸಂಗಮ ಮಿಲನ ಸಂಭ್ರಮ ಮಧುರ ಸಂಗಮ 

ಹೆಣ್ಣು : ನಾವು ಅರಿಯದೆ ಹೊಮ್ಮಿ ಬಂತು ಪ್ರೀತಿ ಇಂದು ಜಿಗಿ ಜಿಗಿವ ಕಾರಂಜಿಯಂತೆ 
          ನಾವು ಅರಿಯದೆ ಹೊಮ್ಮಿ ಬಂತು ಪ್ರೀತಿ ಇಂದು ಜಿಗಿ ಜಿಗಿವ ಕಾರಂಜಿಯಂತೆ 
ಗಂಡು : ನಮ್ಮ ಕನಸೆಲ್ಲವೂ ಇನ್ನೂ ಏಕ ರೀತಿ ತುಟಿ ಸ್ವರದಲ್ಲಿ ಮೇಳೈಸಿದಂತೆ 
ಹೆಣ್ಣು : ನಡೆ ನೀ ನಾನೊಂದು ನೀ ನಡೆಸಿದಂತೆ ಮುಂದೆ ನೀ ಹಿಂದೆ ನಾ 
          ಮುಂದೆ ನೀ ಹಿಂದೆ ನಾ  
ಇಬ್ಬರು : ಮಧುರ ಸಂಗಮ ಮಿಲನ ಸಂಭ್ರಮ ಮಧುರ ಸಂಗಮ 
--------------------------------------------------------------------------------------------------------------------------

ಲಕ್ಷ್ಮಿ ಪ್ರಸನ್ನ (೧೯೮೧)
ಸಂಗೀತ : ಪೆಂಡಾಲ್ ಶ್ರೀನಿವಾಸನ್ ಸಾಹಿತ್ಯ : ಚಿ.ಉದಯಶಂಕರ ಗಾಯನ :  ಕಸ್ತೂರೀಶಂಕರ 

(ಹ್ಹೀ...ಹ್ಯಾ  )
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಕಣ್ಣುಗಳು ಅತ್ತಿತ್ತ ಆಡಿರಬೇಕು 
ಮೈಮನಸು ತೂರಾಡಿ ನಲಿಯುತಿರಬೇಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
(ಹ್ಹ..ಹಾ ಹ್ಹ..ಹಾ ಹ್ಹ..ಹಾ ಹ್ಹ..ಹಾ ಹ್ಹ..ಹಾ )

ಇಲ್ಲೇಕೆ ಸಂಕೋಚವೂ ಹೇಳು ಇನ್ನೇಕೆ ದೂರವೂ ಬಾರೋ 
ಸೇದೋ ಬತ್ತಿ ಸೇದೋ ನೀ ಹೋದು ಹೊಗೆಯ ಹೋದು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 

(ಹ್ಹ..ಹಾ ಹ್ಹ..ಹಾ ಹ್ಹ..ಹಾ ಹ್ಹ..ಹಾ ಹ್ಹ..ಹಾ )
ಆಕಾಶವೇ ಹೊದ್ದಿಕೆ  ಎಂದೋ ಹೊಯ್ ಈ ಭೂಮಿಯೇ ಹಾಸಿಗೆ ಇಂದೋ 
ಎಲ್ಲಾ ಇಲ್ಲಿ ಒಂದು ನೀ ಸೇರಿ ಹಣ ಒಂದು 
ಎಲ್ಲಾ ಇಲ್ಲಿ ಒಂದು ನೀ ಸೇರಿ ಹಣ ಒಂದು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಕಣ್ಣುಗಳು ಅತ್ತಿತ್ತ ಆಡಿರಬೇಕು 
ಮೈಮನಸು ತೂರಾಡಿ ನಲಿಯುತಿರಬೇಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
ಮಾತಿನ್ನೇಕೆ ಬೇಕು ಬರಿ ಮತ್ತೇರಿದರೇ ಸಾಕು 
-------------------------------------------------------------------------------------------------------------------------

ಲಕ್ಷ್ಮಿ ಪ್ರಸನ್ನ (೧೯೮೧)
ಸಂಗೀತ : ಪೆಂಡಾಲ್ ಶ್ರೀನಿವಾಸನ್ ಸಾಹಿತ್ಯ : ಆರ್.ಏನ.ಜಯಗೋಪಾಲ್  ಗಾಯನ :  ಪಿ.ಸುಶೀಲಾ, ರಾಮಕೃಷ್ಣ

ಹೆಣ್ಣು : ಗಾಳಿಯು ನಲಿದಿದೆ ಸಾಗರ ಕುಣಿದಿದೆ 
          ಮೇಘವು ತೇಲಿದೆ ನೋಡಿದೆಯಾ 
          ಈ ಮೌನವು ಏಕೇ ಮೌನವು ಏಕೇ ಹೇಳುವೆಯಾ  ಗೆಳೆಯಾ 
ಗಂಡು : ಗಾಳಿಯು ನಲಿದರೂ ಸಾಗರ ಕುಣಿದರೂ 
           ಹರುಷವು ಏಕೋ ದೂರವಿದೇ 
           ಈ ಮನದಲಿ ಏನೋ ಮನದಲಿ ಏನೋ ಭಾರವಿದೆ..ಭಾರವಿದೇ 

ಹೆಣ್ಣು : ಎಲ್ಲೆಲ್ಲೂ ಸಂತೋಷ ಉಲ್ಲಾಸ ತುಂಬಿರಲು ಬೇಸರವೂ ಇನ್ನೇತಕೆ ನಿನಗೇ 
ಗಂಡು : ಎದೆಯಲ್ಲಿ ನೋವಿಂದ ಆನಂದ ಇಂಗಿರಲೂ  
           ಎದೆಯಲ್ಲಿ ನೋವಿಂದ ಆನಂದ ಇಂಗಿರಲೂ  ಆಸೆಗಳು ಇನ್ನೇಕೆ ನನಗೆ 
          ತಾಳೆನು ನಾನು ಈ ಬೇಗೆ 
ಹೆಣ್ಣು : ಗಾಳಿಯು ನಲಿದಿದೆ ಸಾಗರ ಕುಣಿದಿದೆ 
          ಮೇಘವು ತೇಲಿದೆ ನೋಡಿದೆಯಾ 
          ಈ ಮೌನವು ಏಕೇ ಹೇಳುವೆಯಾ  
  
ಗಂಡು: ನಿನಗೇಕೆ ಈ ಸ್ನೇಹ ಈ ಮೋಹ ನನ್ನಲ್ಲಿ ಬೇಡುವೆನು ಬೀಡು ನನ್ನ ನೀನು 
ಹೆಣ್ಣು :ನಿನಗಾಗಿ ಹಿತವಾದ ಹೊಸಬಾಳು ಕಾದಿರಲೂ             
         ನಿನಗಾಗಿ ಹಿತವಾದ ಹೊಸಬಾಳು ಕಾದಿರಲೂ ಈ ಚಿಂತೆ ನಿನಗೇಕೆ ಇನ್ನೂ 
         ನಿನ್ನಲ್ಲಿ ನೋವು ಇನ್ನೇನೂ 
          ಗಾಳಿಯು ನಲಿದಿದೆ ಸಾಗರ ಕುಣಿದಿದೆ 
          ಮೇಘವು ತೇಲಿದೆ ನೋಡಿದೆಯಾ 
          ಈ ಮೌನವು ಏಕೇ ಹೇಳುವೆಯಾ.. ಓ..ಗೆಳೆಯಾ   
-------------------------------------------------------------------------------------------------------------------------  

1 comment:

  1. ಗಾಳಿಯು ನಲಿದಿದೆ - ಎಸ್. ಪಿ.ಬಿ. ಹಾಡಿರೋದಲ್ಲ. ರಾಮಕೃಷ್ಣ ಹಾಡಿರೋದು

    ReplyDelete